ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಸೋಮವಾರ ಯುಪಿಐ ಮತ್ತು ಐಪಿಎಂಎಸ್ ಯೋಜನೆಗಳ ಉದ್ಘಾಟನೆಯಲ್ಲಿ ಅಣ್ಣಾಸಾಹೇಬ ಜೊಲ್ಲೆ, ಅಶೋಕ ಪಟ್ಟಣ, ಅಪ್ಪಾಸಾಹೇಬ ಕುಲಗುಡೆ, ಚನ್ನರಾಜ ಹಟ್ಟಿಹೊಳಿ, ವಿರೂಪಾಕ್ಷ ಮಾಮನಿ, ಮಲ್ಲಪ್ಪ ಯಾದವಾಡ, ಅರವಿಂದ ಪಾಟೀಲ, ಅಮರನಾಥ ಜಾರಕಿಹೊಳಿ ಇತರರಿದ್ದರು.
ಬೆಳಗಾವಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಸಿಸಿ ಬ್ಯಾಂಕುಗಳು ಕೇವಲ ಕೃಷಿ ಸಾಲ ವಿತರಣೆಗೆ ಮಾತ್ರ ಅಂಟಿಕೊಳ್ಳದೇ ಕೃಷಿಯೇತರ ಸಾಲಗ ಳನ್ನೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿತರಿಸುವ ಯೋಜನೆಗಳನ್ನು ಕೈಗೊಂಡಾಗ ಮಾತ್ರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಲು ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಬ್ಯಾಂಕಿನಲ್ಲಿ ಸೋಮವಾರ ಆಯೋಜಿಸಿದ್ದ ಯುಪಿಐ ಮತ್ತು ಐಪಿಎಂಎಸ್ ಸೇವೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲ ಬಳಸಿಕೊಂಡು ಸಹಕಾರಿ ಬ್ಯಾಂಕಿಂಗ್ ಕೆ ್ಷೀತ್ರದಲ್ಲಿ ನವೀನ ಹೆಜ್ಜೆ ಇಟ್ಟಿರುವ ಬೆಳಗಾವಿ ಡಿಸಿಸಿ ಬ್ಯಾಂಕ್, ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಆಧುನಿಕ ಹಾಗೂ ವೇಗವಾದ ಹಣಕಾಸು ಸೇವೆಗಳನ್ನು ಒದಗಿಸಲು ಬ್ಯಾಂಕ ಮುಂದಾಗಿದೆ. ಇಂದು ತ್ವರಿತ ಮತ್ತು ಸುರಕ್ಷಿತ ಸೇವೆಗಳು ಅಗತ್ಯವಾಗಿದ್ದು, ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆಗಳನ್ನು ವಿಸ್ತರಿಸುವುದು ಬ್ಯಾಂಕಿನ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಐಟಿ ವಿಭಾಗದ ಮುಖ್ಯಸ್ಥ ಸುನೀಲ ಕಾಂಬಳೆ ಮಾತನಾಡಿ, ಬ್ಯಾಂಕಿನಲ್ಲಿ ಅಳವಡಿಸಿಕೊಂಡ ಹಾಗೂ ಗ್ರಾಹಕರಿಗೆ ಒದಗಿಸುವ ಎಲ್ಲ ಸೇವೆಗಳ ಕುರಿತು ಮಾಹಿತಿ ನೀಡಿದರು.
ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಚನ್ನರಾಜ ಹಟ್ಟಿಹೊಳಿ, ವಿರೂಪಾಕ್ಷ ಮಾಮನಿ, ಮಲ್ಲಪ್ಪ ಯಾದವಾಡ, ನಿರ್ದೇಶಕ ಮಹಾಂತೇಶ ದೊಡಗೌಡರ, ನಾನಾಸಾಹೇಬ ಪಾಟೀಲ, ಅಶೋಕ ಪಟ್ಟಣ, ಅಮರನಾಥ ಜಾರಕಿಹೊಳಿ, ಅರವಿಂದ ಪಾಟೀಲ ಇತರರಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಜಿ.ಕಲಾವಂತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.