ಶಿರಗುಪ್ಪಿ ಗ್ರಾಮದ ಮಾನಕೆಚಿ ಪಾಣಂದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಎಂ.ಪಿ.ಪಾಟೀಲ, ಪ್ರಕಾಶ ಶಿಂಧೆ, ಸಿದ್ದು ನರಾಟೆ, ಪಂಕಜ ದೇಸಾಯಿ ಇತರರಿದ್ದರು.
ನಿಪ್ಪಾಣಿ:
ಶಿರಗುಪ್ಪಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಪಾಣಂದ ರಸ್ತೆ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಪ್ರಗತಿ ಕಾಮಗಾರಿಗಳಿಗೆ ಭೇದ ಮಾಡದೆ ಅನುದಾನ ಒದಗಿಸಿದ್ದಾರೆ.
ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು. ಪ್ರಕಾಶ ಶಿಂಧೆ, ಸಿದ್ದು ನರಾಟೆ, ಪಂಕಜ ದೇಸಾಯಿ, ಮಹಾದೇವ ಸುತಾರ, ಸಂಭಾಜಿ ಚೌಹಾಣ, ಬಾಳಾಸಾಹೇಬ ದೇವಡಕರ, ಸಚಿನ ದೇಸಾಯಿ, ಮಾರುತಿ ಪವಾರ, ವಿವೇಕ ಮೋಕಾಶಿ, ಸಂಜಯ ಬಾಮಣೆ, ಸತೀಶ ಕಾಳವೆ, ಕಾಶಿನಾಥ ದೇಸಾಯಿ, ಆನಂದ ಪಾಟೀಲ, ಸುರೇಶ ಪವಾರ, ಸಲೀಂ ಮುಲ್ಲಾ, ಬಾಬಾಸಾಹೇಬ ಡಾಳೆ ಇತರರಿದ್ದರು.