ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಜರುಗಿದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಕರ್ನಲ್ ಡಾ.ಎಂ.ದಯಾನಂದ ಸಸಿಗೆ ನೀರೆರೆದರು. ಡಾ.ಆರೀಫ್ ಮಾಲ್ದಾರ, ಡಾ.ಪ್ರೀತಿ ಮಾಸ್ತೆ, ಡಾ.ಬಸವರಾಜ ಬಿಜ್ಜರಗಿ, ಪ್ರಶಾಂತ ದೇಸಾಯಿ ಇತರರಿದ್ದರು.
ಬೆಳಗಾವಿ: ತಂತ್ರಜ್ಞಾನ ಬಳಕೆಯಿಂದಲೂ ಪರಿಸರಕ್ಕೆ ಕೊಡುಗೆ ನೀಡಬಹುದು. ಮುಖ್ಯವಾಗಿ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳು ಕಾಗದ ರಹಿತ ಆಡಳಿತಕ್ಕೆ ಉತ್ತೇಜನ ನೀಡಬೇಕು ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 23 ವರ್ಷಗಳಿಂದ ಆಸ್ಪತ್ರೆಯಲ್ಲಿ ಕಸ ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತಿದೆ. ಅಪಾಯಕಾರಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ವೈದ್ಯಕೀಯ ನಿರೀಕ್ಷಕ ಡಾ.ಆರೀಫ್ ಮಾಲ್ದಾರ್, ಮೈಕ್ರೊಬಯಾಲಾಜಿಸ್ಟ್ ಡಾ. ಪ್ರೀತಿ ಮಾಸ್ತೆ, ಡಾ.ಬಸವರಾಜ ಬಿಜ್ಜರಗಿ, ಪ್ರಶಾಂತ ದೇಸಾಯಿ ಇತರರಿದ್ದರು. ಡಾ.ದೀಪಕ ಕರನಮ್ ಸ್ವಾಗತಿಸಿದರು. ಡಾ.ವಿದ್ಯಾ ನಿರೂಪಿಸಿದರು. ಡಾ.ವೀಣಾ ವಂದಿಸಿದರು.