ಭಿರಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶರು ಉದ್ಘಾಟಿಸಿದರು. ಸುಖೇಂದ್ರ ಪಿ.ಎಂ., ಸದಾಶಿವ ದೇಸಿಂಗೆ, ವಿ.ಎಂ.ಗಲಗಲಿ ಇತರರಿದ್ದರು.
ರಾಯಬಾಗ: ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿ, ಉತ್ತಮ ಆರೋಗ್ಯ ಹೊಂದಬೇಕೆಂದು 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸುಖೇಂದ್ರ ಪಿ.ಎಂ. ಹೇಳಿದರು.
ಭಿರಡಿ ಗ್ರಾಮದ ಮುರಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಜಂಕ್‌ುಡ್ ನೀಡದೆ, ಪೌಷ್ಟಿಕ ಆಹಾರ ನೀಡಬೇಕೆಂದರು.
ಸಿಡಿಪಿಒ ಭಾರತಿ ಕಾಂಬಳೆ ಮಾತನಾಡಿ, ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರು ಅಪೌಷ್ಟಿಕತೆಯಿಂದ ಬಳಲಬಾರದೆಂದು ಸರ್ಕಾರ ಅಂಗನವಾಡಿ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಸದಾಶಿವ ದೇಸಿಂಗೆ, ವಕೀಲ ವಿ.ಎಂ.ಗಲಗಲಿ ಮಾತನಾಡಿದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, 1ನೇ ಹೆಚ್ಚುವರಿ ನ್ಯಾಯಾಧೀಶೆ ನಿವೇದಿತಾ ಬನ್ನಾಳ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ಉಪಾಧ್ಯಕ್ಷ ಕೆ.ಎಲ್.ಕೆರೂರೆ, ಸಹ ಕಾರ್ಯದರ್ಶಿ ಎಂ.ಬಿ.ಬಂತಿ, ಎಪಿಪಿ ಮಹಾವೀರ ಗಂಡವ್ವಗೋಳ, ಪ್ರೊಬೇಷನರಿ ಪಿಎಸ್‌ಐ ಮಂಜುನಾಥ ಹೊಸಮನಿ, ವಕೀಲರಾದ ಎ.ಬಿ.ನಿಡೋಣಿ, ಎಸ್.ಎಂ.ಸಲಗರೆ, ಎಸ್.ಎಂ.ಕಳ್ಳೆ, ರಾಕೇಶ ಹನಗಂಡಿ, ರಾಜು ಹಿಪ್ಪರಗಿ ಇತರರಿದ್ದರು. ಶಿಕ್ಷಕ ಆರ್.ವೈ.ಯಮಗರ ಸ್ವಾಗತಿಸಿದರು. ಕಾಮಣ್ಣ ಹೆಳವರ ನಿರೂಪಿಸಿದರು.