ಹಿಡಕಲ್ ಜಲಾಶಯ ಬಳಿ ಬೃಹತ್ ಉದ್ಯಾನ ಕಾಶಿ ಯೋಜನಾ ಕಾಮಗಾರಿ 2ನೇ ಹಂತಕ್ಕೆ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ಮಹಾನಿಂಗ ಸನದಿ, ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಕೆಂಪಣ್ಣ ದೇಸಾಯಿ ಇತರರಿದ್ದರು. 
ಬೆಳಗಾವಿ

ಮಕ್ಕಳ ಆಕರ್ಷಣೆಗಾಗಿ ರೈಲ್ವೆ ಟ್ರ್ಯಾಕ್ ನಿರ್ಮಾಣ

ಹುಕ್ಕೇರಿ: ತಾಲೂಕಿನತ್ತ ಜನರ ಚಿತ್ತ ಆಗುವಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ತಂದೆ ದಿ.ಉಮೇಶ ಕತ್ತಿ ಅವರು ಹಿಡಕಲ್ಲ ಜಲಾಶಯ ಬಳಿ ಬೃಹತ್ ಉದ್ಯಾನ ಕಾಶಿ ಕಾಮಗಾರಿ ಯೋಜನೆಗೆ ಚಾಲನೆ ನೀಡಿದ್ದರು. ಇದೀಗ 2ನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅವರ ಕನಸನ್ನು ನನಸು ಮಾಡುತ್ತಿರುವುದು ಸಂತಸ ತಂದಿದೆ ಎಂದು
ಶಾಸಕ ನಿಖಿಲ ಕತ್ತಿ ತಿಳಿಸಿದರು.
ಉದ್ಯಾನ ಕಾಶಿ ಯೋಜನೆಯ 2ನೇ ಹಂತದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, 20.80 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ 2.4ಕಿ.ಮೀ ಸುತ್ತಳತೆಯ ಮಕ್ಕಳ ಆಕರ್ಷಿಸುವ ರೈಲ್ವೆ ಮತ್ತು ಅದರ ಟ್ರ್ಯಾಕ್ ನಿರ್ಮಾಣ,
ಪ್ರವಾಸಿಗರಿಗೆ ಆಸನಗಳ ವ್ಯವಸ್ಥೆ, ಆವರಣ ಗೋಡೆ, ಶೌಚಗೃಹ, ಸಂಪೂರ್ಣ ವಿದ್ಯುತ್ತೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ ಎಂದರು.
4.50 ಕೋಟಿ ರೂ. ವೆಚ್ಚದ ಉಪಹಾರ ಗೃಹ ಕಾಮಗಾರಿ ಟೆಂಡರ್ ಶೀಘ್ರದಲ್ಲಿ ಕರೆಯಲಾಗುವುದು. ನಂತರ ಬಿದಿರು ಜೀವವೈವಿಧ್ಯ ವನ ನಿರ್ಮಾಣಕ್ಕಾಗಿ ಬಿದಿರು ಸಸಿ ನಾಟಿ ಮಾಡುವ ಕಾರ್ಯ ನೆರವೇರಿಸಿದರು. ಈಗಾಗಲೇ ಪ್ರಗತಿ ಹಂತದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಕಾಮಗಾರಿ ವೀಕ್ಷಿಸಿದರು.
ನೀರಾವರಿ ನಿಗಮ ಹಿಡಕಲ್ಲ ಡ್ಯಾಂ ಕಾರ್ಯ ನಿರ್ವಾಹಕ ಅಭಿಯಂತ ಶ್ರೀಮಂತ ಕಾಂಬಳೆ, ಸಹಾಯಕ ಅಭಿಯಂತ ಸುಬ್ಬಣ್ಣ ಕಾಮತ, ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಶೇಖರ ಪಾಟೀಲ, ಆರ್‌ಎ್ಒ ಬಿ.ಎಲ್.ಸನದಿ, ಮಹಾನಿಂಗ ಸನದಿ, ಸತ್ಯಪ್ಪ ನಾಯಿಕ, ಶಿವನಗೌಡ ಮದವಾಲ, ಗುರುಸಿದ್ಧ ಮಾಡಲಗಿ, ಗುರುರಾಜ ಕುಲಕರ್ಣಿ, ಕೆಂಪಣ್ಣ ದೇಸಾಯಿ, ಬಾಹುಬಲಿ ನಾಗನೂರಿ, ಎಚ್.ಎಲ್.ಪೂಜೇರಿ, ಸುರೇಶ ತೇರಣಿ, ಶಿವಾನಂದ ನೊಗನಿಹಾಳ, ಬಸವರಾಜ ಗಂಗಣ್ಣವರ, ಬಿ.ಬಿ.ಪಾಟೀಲ, ಪಿ.ಆರ್.ನಂದಗಾಂವಿ, ಆರ್.ಕರುಣಾ ಇತರರಿದ್ದರು.