ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಜಗದೀಶ ಶೆಟ್ಟರ್ ಸಭೆ ನಡೆಸಿದರು. ಭುವನೇಶ ಕುಮಾರ, ಈರಣ್ಣ ರೊಟ್ಟಿ ಇತರರಿದ್ದರು. 
ಬೆಳಗಾವಿ

ಹಿರೇಬಾಗೇವಾಡಿಯಲ್ಲಿ ಕೆಳ ಸೇತುವೆ ನಿರ್ಮಾಣ

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ಸಾರ್ವಜನಿಕರ ಅನುಕೂಲಕ್ಕಾಗಿ ಕೆಳ ಸೇತುವೆ (ಅಂಡರ್‌ಪಾಸ) ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಜಗದೀಶ ಶೆಟ್ಟರ ಸೂಚನೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಹಿರೇಬಾಗೇವಾಡಿ ಗ್ರಾಮದ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಹುಬ್ಬಳ್ಳಿಧಾರವಾಡ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ತಮ್ಮ ಕೃಷಿ ಜಮೀನುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿರುವ ಕುರಿತು ರೈತರು ದೂರಿದ್ದಾರೆ. ಹೀಗಾಗಿ ಸೇತುವೆ ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಬೇಡಿ ಎಂದು ಸೂಚಿಸಿದರು.
ಜಂಟಿ ಸಮೀಕ್ಷೆ ನಡೆಸಲು ಸೂಚನೆ:ಗೋಕಾಕ ತಾಲೂಕಿನ ಘಟಪ್ರಭಾ ರೈಲು ನಿಲ್ದಾಣದ ಹತ್ತಿರ ರೈಲು ನಿಲ್ದಾಣಕ್ಕೆ ಹೊಂದಿಕೊಂಡು ಘಟಪ್ರಭಾ ನಿವಾಸಿಗಳು ನಿರ್ಮಿಸಿದ ವಸತಿ ,ಅಂಗಡಿಗಳನ್ನು ತೆರವುಗೊಳಿಸಲು ರೇಲ್ವೆ ಇಲಾಖೆಯು ನೀಡಿದ ನೋಟಿಸ್ ನೀಡಿರುವ ಕುರಿತು ಸಂಸದ ಜಗದೀಶ ಶೆಟ್ಟರ್ ನೈರುತ್ಯ ವಲಯ ರೇಲ್ವೆ ಅಧಿಕಾರಿಗಳು, ಘಟಪ್ರಭಾ ನಿವಾಸಿಗಳು ಜತೆ ಸಭೆ ನಡೆಸಿದರು.
ರೇಲ್ವೆ ಇಲಾಖೆ ಮತ್ತು ರಾಜ್ಯ ಸರಕಾರದ ಭೂ-ಮಾಪನ ಇಲಾಖೆ ಜಂಟಿ ಸಮೀಕ್ಷೆಯನ್ನು ನಡೆಸಿ ಒಂದು ನಿಖರವಾದ ವರದಿಯನ್ನು ನೀಡುವಂತೆ ತಿಳಿಸಿ, ವಿಷಯ ಇತ್ಯರ್ಥವಾಗುವ ವರೆಗೆ ರೇಲ್ವೆ ಇಲಾಖೆ ಅಧಿಕಾರಿಗಳು, ವಿವಾದವಿರುವ ಸ್ಥಳದಲ್ಲಿ ವಾಸವಿರುವ ನಿವಾಸಿಗಳಿಗೆ ಜಾಗವನ್ನು ತೆರವು ಮಾಡುವ ಕುರಿತು ಯಾವುದೇ ತರಹದ ನೋಟಿಸ್ ನೀಡದೆ ಇರುವಂತೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭುವನೇಶ ಕುಮಾರ, ಈರಣ್ಣ ರೊಟ್ಟಿ ಇತರರಿದ್ದರು.
...........