ಕೆಂಚಲಾರಕೊಪ್ಪ ಕ್ರಾಸ್‌ನಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಹಾಗೂ ಡಾ.ಸಿ.ವಿ.ನವದಗಿ ಭೂಮಿಪೂಜೆ ನೆರವೇರೆಸಿದರು. ಶಿವಾನಂದ ಪಟ್ಟಣಶೆಟ್ಟಿ, ವಿರೇಶ ಬ್ಯಾಹಟ್ಟಿ, ಪ್ರಭು ಪ್ರಭುನವರ ಇತರರಿದ್ದರು. 
ಬೆಳಗಾವಿ

ಸಾರ್ವಜನಿಕರಿಗಾಗಿ ವಾಕಿಂಗ್ ಸ್ಟ್ರೀಟ್ ನಿರ್ಮಾಣ

ತಾಲೂಕಿನ ಕೆಂಚಲಾರಕೊಪ್ಪ ಹನುಮಾನ ದೇವಸ್ಥಾನ ಕ್ರಾಸ್‌ನಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯ 570 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರಸ್ತೆ ಗುಣಮಟ್ಟದಿಂದ ಅಭಿವೃದ್ಧಿಪಡಿಸಲಾಗುತ್ತದೆ.
ಜತೆಗೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾಕಿಂಗ್ ಸ್ಟ್ರೀಟ್ ನಿರ್ಮಿಸಿ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸವದತ್ತಿ ನದಿ ಈಜುಗರ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಡಾ.ಸಿ.ವಿ.ನವದಗಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ವೀರೇಶ ಬ್ಯಾಹಟ್ಟಿ, ಬಸವರಾಜ ಬೇವೂರ, ಪ್ರಭು ಪ್ರಭುನವರ, ಬಸವರಾಜ ಹಂಪಣ್ಣವರ, ಸುಭಾಸ ರಜಪೂತ, ಉಮೇಶ ಗೌಡರ, ಗುತ್ತಿಗೆದಾರ ವೈಭವ ಭಡಾಲೆ, ಪಿಡಬ್ಲೂೃಡಿ ಎಇಇ ವಿಜಯ ಸಂಗಪ್ಪಗೋಳ, ಪ್ರವೀಣ ಪಾಟೀಲ,