ಲಕ್ಷ್ಮೇಶ್ವರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ರೇವಣಸಿದ್ಧ ಶರಣರು, ಮಹಾದೇವಪ್ಪ ಭೋವಿ ಇತರರಿದ್ದರು.
- ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
- ಲಕ್ಷ್ಮೇಶ್ವರ ಗ್ರಾಮಸ್ಥರಿಂದ ಸನ್ಮಾನ
ಮೂಡಲಗಿ: ಲಕ್ಷ್ಮೇಶ್ವರ-ಹೊನಕುಪ್ಪಿ ಗ್ರಾಮಗಳಿಗೆ ನೀರಿನ ಅನುಕೂಲವಾಗಲು ಕೆರೆ ನಿರ್ಮಿಸಲು ಚಿಂತನೆ ನಡೆಸುತ್ತಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಲಕ್ಷ್ಮೇಶ್ವರ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿ ಮಾತನಾಡಿ, ಕೆರೆ ನಿರ್ಮಾಣದಿಂದ ಉಭಯ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಲಕ್ಷ್ಮೇಶ್ವರ ಮತ್ತು ಹೊನಕುಪ್ಪಿ ಗ್ರಾಮಗಳಿಗೆ ಘಟಪ್ರಭಾ ಬಲದಂಡೆ ಕಾಲುವೆಯಿಂದ ನೀರು ತರಲು ಪ್ರಯತ್ನ ನಡೆಸುತ್ತಿದ್ದೇನೆ. ಆದರೆ, ಕಾಲುವೆಯಿಂದ ಸುಮಾರು 15 ಕಿ.ಮೀ ದೂರ ಇರುವುದರಿಂದ ಗ್ರಾಮಗಳಿಗೆ ನೀರು ವಿಳಂಬವಾಗಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಲಕ್ಷ್ಮೇಶ್ವರ ಮತ್ತು ಹೊನಕುಪ್ಪಿ ಗ್ರಾಮಗಳಿಗೆ ಶಾಶ್ವತವಾಗಿ ನೀರು ಸೌಲಭ್ಯ ಕಲ್ಪಿಸಲು ಕೆರೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು.
ದೇವಸ್ಥಾನಗಳಿಗೆ ಅಗತ್ಯ ನೆರವು: ಸ್ಥಳೀಯ ಶ್ರೀ ಏಳುಮಲ್ಲಯ್ಯ, ಶ್ರೀ ಬಸವಣ್ಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗುವುದು ಎಂದರು.
ರೈತರ ತೋಟ-ಪಟ್ಟಿ ರಸ್ತೆ ದುರಸ್ತಿ ಮಾಡಿಸುತ್ತಿದ್ದೇನೆ. ಒಟ್ಟು 136 ತೋಟದ ರಸ್ತೆಗಳನ್ನು ಸ್ವಂತ ದುಡ್ಡಿನಲ್ಲಿ ಅಭಿವದ್ಧಿ ಮಾಡುತ್ತಿರುವುದಾಗಿ ತಿಳಿಸಿದರು.
ರೇವಣಸಿದ್ಧ ಶರಣರು, ಪ್ರಭಾ ಶುಗರ್ಸ್ ನಿರ್ದೇಶಕ ಮಹಾದೇವಪ್ಪ ಭೋವಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮಾಳಪ್ಪ ತೋಗರಿ, ರವೀಂದ್ರ ಕಣಕಿಕೋಡಿ, ರೇವಣಸಿದ್ಧ ಕಣಕಿಕೋಡಿ, ರಾಘವೇಂದ್ರ ಸೂರಣ್ಣವರ, ರಮೇಶ ಗಡಗಿ, ಮಹಾದೇವ ಮಾಳಿ, ಆನಂದ ಸಿದ್ದುಮಾಳಿ, ಸಂಜು ಗಡಗಿ, ಬೀರಪ್ಪ ಕಂಬಳಿ, ಮಹಾದೇವ ಮುತಾರಿ, ಸಂಜು ದೊಡ್ಡಭೀಮಪ್ಪಗೋಳ, ಮಾರುತಿ ಹಳ್ಳಿ ಇತರರಿದ್ದರು.