ಬೆಳಗಾವಿ ತಾಲೂಕಿನ ರಾಜಹಂಸಗಡದಲ್ಲಿ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತಿಸಿಕೊಂಡರು.  
ಬೆಳಗಾವಿ

ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆ

ಡಿ.ವಿ. ಕಮ್ಮಾರ
ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 7 ವರ್ಷಗಳಿಂದ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ಬೇರೆ ಪಕ್ಷದ ಅನೇಕರು ಈಗ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕುತ್ತಿದ್ದು, ಅಭಿವೃದ್ಧಿ ಬೆಂಬಲಿಸಿ ಬರುತ್ತಿರುವವರನ್ನು ಸ್ವಾಗತಿಸಿಕೊಳ್ಳಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ರಾಜಹಂಶಗಡದಲ್ಲಿ ಬುಧವಾರ ಜರುಗಿದ ಸಮಾರಂಭದಲ್ಲಿ ಬಿಜೆಪಿಯ 50ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಯಾವುದೇ ಷರತ್ತಿಲ್ಲದೇ, ಕಾಂಗ್ರೆಸ್ ತತ್ವ, ಸಿದ್ಧಾಂತದಲ್ಲಿ ವಿಶ್ವಾಸವಿಟ್ಟು ಬರುವವರಿಗೆ ಸದಾ ಸ್ವಾಗತವಿದೆ ಎಂದು ಆಹ್ವಾನ ನೀಡಿದರು.
ಯಾವುದೇ ರಾಜಕೀಯವಿಲ್ಲದೆ ಇಡೀ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇನೆ. ಇದು ಬೇರೆ ಪಕ್ಷದವರನ್ನು ನಮ್ಮ ಪಕ್ಷದತ್ತ ಸೆಳೆಯುವಂತೆ ಮಾಡಿದೆ ಈ ಮೂಲಕ ನಮ್ಮ ಕ್ಷೇತ್ರ ಹೊಸ ದಿಕ್ಕಿನತ್ತ ಸಾಗುತ್ತಿದ್ದು ‘ಮಾದರಿ ಬೆಳಗಾವಿ ಗ್ರಾಮೀಣ ಕ್ಷೇತ್ರ’ ನಿರ್ಮಾಣವೇ ನನ್ನ ಸಂಕಲ್ಪವಾಗಿದೆ ಎಂದರು.
ಲಕ್ಷ್ಮಣ ತೋರಾವತ, ಸಿದ್ದಪ್ಪ ಛತ್ರೆ, ಪಿ.ಜಿ. ಪವಾರ, ಶಂಕರ ಎನ್., ಸುರೇಶ ತೋರಾವತ, ಬಸವಂತ ತೋರಾವತ, ಹನಮಂತ ನಾವಗೇಕರ, ಮೊನಿಶ್ರೀ,. ಮಲ್ಲಿಕಾಜುರ್ನ ಬಾಳು ದೇಸೂರಕರ ಇತರರಿದ್ದರು.