ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಡಿವಾಳಪ್ಪ ಹೋಟಿ, ಆನಂದ ಮೂಗಿ, ಸುಭಾಸ ತುರಮರಿ, ಗುರು ಮೆಟಗುಡ್ಡ, ಎ್.ಎಸ್.ಸಿದ್ಧನಗೌಡ್ರ ಇತರರಿದ್ದರು. 
ಬೆಳಗಾವಿ

ನಾರಿಯರಿಗೆ ದ್ರೋಹವೆಸಗಿದ ಕಾಂಗ್ರೆಸ್

ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ರತ್ನಾ ಗೋಧಿ ಮಾತನಾಡಿ, ದೇಶದ ಮಹಿಳೆಯರಿಗೆ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ನಾರಿ ಶಕ್ತಿ ವಂದನಾ ಅಧಿನಿಯಮ’ ತಂದಿತ್ತು. ಆದರೆ, ದೇಶದ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಹಾಗೂ ಅವರ ಸಬಲೀಕರಣವಾಗಬಾರದು ಎನ್ನುವ ಮನಸ್ಥಿತಿಯಿಂದ ಕಾಂಗ್ರೆಸ್ ಮಹಿಳೆಯರಿಗೆ ದ್ರೋಹವೆಸಗಿದೆ. ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಈ ನಿರ್ಧಾರದಿಂದ ಮಹಿಳೆಯರು ಜಾಗೃತಗೊಳ್ಳಬೇಕಿದೆ ಎಂದರು.
ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ ಕಡಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎ್.ಎಸ್.ಸಿದ್ಧನಗೌಡ್ರ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ಮುಖಂಡರಾದ ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ, ಆನಂದ ಮೂಗಿ, ಪ್ರವೀಣ ಶಿಂಗಾರಿ, ಸದಾಶಿವ ಪಾಟೀಲ, ರಿತೇಶ್ ಪಾಟೀಲ, ಸುವರ್ಣಾ ರಾಮದುರ್ಗ, ಆಶಾ ಕಸಮಳಗಿ ಇತರರಿದ್ದರು.