ಹಲ್ಯಾಳ ಗ್ರಾಮದಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿ ಭೂಮಿಪೂಜೆ ಸಮಾರಂಭದಲ್ಲಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರನ್ನು ಚಿದಾನಂದ ಸವದಿ ಸನ್ಮಾನಿಸಿದರು. ಕುಮಾರ ಪಾಟೀಲ, ಪರಪ್ಪ ಶೇಗುಣಸಿ, ಜಡೆಪ್ಪ ಕುಂಬಾರ ಇತರರಿದ್ದರು.
ಅಥಣಿ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಹಕಾರ ಸಚಿವ ಲಕ್ಷ್ಮಣ ಸವದಿ ಬದ್ಧರಾಗಿದ್ದು, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸೋಮವಾರ 25 ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ನಿರ್ಮಾಣವಲ್ಲ, ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಉತ್ತಮ ರಸ್ತೆ,
ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪ, ಶಾಲೆ, ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಮತ್ತು ಅಗತ್ಯಗಳನ್ನು ಅರಿತು, ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಹಲ್ಯಾಳ ಶಿವಲಿಂಗೇಶ್ವರಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಕುಮಾರ ಪಾಟೀಲ, ಪರಪ್ಪ ಶೇಗುಣಸಿ, ವಿಠ್ಠಲ ಮಗದುಮ್ಮ, ಜಡೆಪ್ಪ ಕುಂಬಾರ, ಕೆಪಿಸಿಸಿ ಸದಸ್ಯ ಚಿದಾನಂದ ಮುಕಣಿ, ಮುರಗೆಪ್ಪ ಗುಮಚಿ, ಸುರೇಶ ವಾಡೇದ, ಜಿಪಂ ಎಇಇ ಈರಪ್ಪ ವಾಲಿ, ಸಿದ್ದಪ್ಪ ಪಾಟೀಲ, ವೀರಯ್ಯ ಮಠದ, ರಮೇಶ ಗುಮಚಿ, ರಾಯಪ್ಪ ಬಾಗಿ, ಸುದರ್ಶನ ಮಾದರ,
ಗಣೇಶ ಮಾದರ, ಬಸವರಾಜ ಮಾದರ ಇತರರಿದ್ದರು.