ಬೋರಗಾಂವದಲ್ಲಿ ಗೊಂದಳಿ ಹಾಗೂ ಅಲೆಮಾರಿ ಸಮುದಾಯದ ಕಾರ್ಯಕರ್ತರು ಉತ್ತಮ ಪಾಟೀಲ ಸಮ್ಮುಖದಲ್ಲಿ ಎನ್‌ಸಿಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ದಿಗಂಬರ ಕಾಂಬಳೆ, ಭಾರತಿ ವಸವಾಡೆ, ಮನೋಜ ಪಾಟೀಲ, ಅಭಯ ಕರೋಲೆ, ಪೀರಗೌಡ ಪಾಟೀಲ ಇತರರಿದ್ದರು.
- ಯುವ ನಾಯಕ ಉತ್ತಮ ಪಾಟೀಲ ಅಭಯ
- ಎನ್‌ಸಿಪಿ ಪಕ್ಷಕ್ಕೆ ಸ್ವಾಗತ
ಬೋರಗಾಂವ: ಪಾಟೀಲ ಕುಟುಂಬ ದಿ.ರಾವಸಾಹೇಬ ಪಾಟೀಲ ಅವರ ಆದರ್ಶ ಪಾಲಿಸುತ್ತ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯಕರ್ತರ ನಂಬಿಕೆಗೆ ಪಾತ್ರವಾಗಿದೆ ಎಂದು ಯುವ ನಾಯಕ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಅಲೆಮಾರಿ ಹಾಗೂ ಗೊಂದಳಿ ಸಮುದಾಯದ ನೂರಾರು ಕಾರ್ಯಕರ್ತರನ್ನು ಶನಿವಾರ ಎನ್‌ಸಿಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಗೊಂದಳಿ ಮತ್ತು ಅಲೆಮಾರಿ ಸಮುದಾಯದ ಜನರ ಪ್ರಗತಿಗೆ ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಅಲೆಮಾರಿ ಸಮುದಾಯದ ನಾರಾಯಣ ಅಡೆಕರ, ರಾಜು ಸಂಕಣ್ಣವರ ಹಾಗೂ ಕಾಕಾಸಾಹೇಬ ವಾಘಮೋಡೆ ಮಾತನಾಡಿ, ೧೫ ವರ್ಷಗಳಿಂದ ನಾವು ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ನಮ್ಮ ಸಮುದಾಯದ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಸಮುದಾಯದ ಏಳಿಗೆಗಾಗಿ ಉತ್ತಮ ಪಾಟೀಲ ಅವರನ್ನು ಬೆಂಬಲಿಸಿದ್ದೇವೆ ಎಂದರು.
ಪಪA ಅಧ್ಯಕ್ಷ ದಿಗಂಬರ ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಅಶೋಕ ಮಾಳಿ, ಸದಸ್ಯರಾದ ಅಭಯಕುಮಾರ ಮಗದುಮ್ಮ, ಮನೋಜ ಪಾಟೀಲ, ಅಭಯ ಕರೋಲೆ, ಪೀರಗೌಡ ಪಾಟೀಲ, ಗೊಂದಳಿ ಸಮುದಾಯದ ನಾರಾಯಣ ಅಡೇಕರ, ಕಾಕಾಸೋ ವಾಘಮೋಡೆ, ದಾದಾಸೋ ವಾಘಮೋಡೆ, ಕುಮಾರ ಇಂಗಳೆ, ಸಾಗರ ವಾಘಮೋಡೆ, ಅಲೆಮಾರಿ ಸಮುದಾಯದ ಸುರೇಶ ಇಂಗಳೆ, ಬಾಬುರಾವ ವಾಘಮೋಡೆ, ಸದಾಶಿವ ವಾಘಮೋಡೆ, ರಾಜು ಸಂಕಣ್ಣನವರ, ಪರಶುರಾಮ ಸಂಕಣ್ಣನವರ, ಮಾರುತಿ ಕೊಂಡೂರ, ನಾಗೇಶ ಸಂಕಣ್ಣನವರ, ದುರ್ಗಪ್ಪ ಕೊಂಡೂರ, ಕೃಷ್ಣ ಸಂಕಣ್ಣನವರ ಇತರರಿದ್ದರು.