ರಾಯಬಾಗ ಸರ್ಕಾರಿ ಕೇಂದ್ರ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಉಪಸ್ಥಿತಿಯಲ್ಲಿ ಮಕ್ಕಳು ಚಾಲನೆ ನೀಡಿದರು. ಎಸ್.ಎಸ್.ಹೊಸಮನಿ, ಎಂ.ವಿ.ಪಟ್ಟಣ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಮಹೇಶ ಕರಮಡಿ, ಎನ್.ವಿ.ಮಠದಕರ, ಸುರೇಶ ಮಾಳಿ ಇತರರಿದ್ದರು. 
ಬೆಳಗಾವಿ

ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಬದ್ಧ

ರಾಯಬಾಗ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪಟ್ಟಣದ ಸರ್ಕಾರಿ ಕೇಂದ್ರ ಶಾಲೆ ಹಾಗೂ ತಾಲೂಕು ಕ್ರೀಡಾಂಗಣಕ್ಕೆ ಬೇಕಾದ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಸರ್ಕಾರಿ ಕೇಂದ್ರ ಶಾಲೆಗೆ ಜಿಲ್ಲಾ ಪಂಚಾಯಿತಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ 30 ಲಕ್ಷ ರೂ. ಅನುದಾನದಲ್ಲಿ ತಾಲೂಕು ಕ್ರೀಡಾಂಗಣಕ್ಕೆ ಮೂಲಸೌಕರ್ಯ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.
ಜಿಪಂ ಎಇ ಎಸ್.ಎಸ್.ಹೊಸಮನಿ, ಮುಖ್ಯಶಿಕ್ಷಕಿ ಎಂ.ವಿ.ಪಟ್ಟಣ, ಬಿಇಒ ಬಸವರಾಜಪ್ಪ ಆರ್., ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಪಿ.ಜಿರಗ್ಯಾಳ, ಮುಖಂಡರಾದ ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪುರೆ, ಮಹೇಶ ಕರಮಡಿ, ಎನ್.ವಿ.ಮಠದಕರ, ಸುರೇಶ ಮಾಳಿ, ಜಿಯಾವುಲ್ ಮುಲ್ಲಾ, ಲಕ್ಷ್ಮಣ ಬಂಡಗರ, ರಾಜು ಮೋಮಿನ್, ಎಸ್.ಎಸ್.ಗೆನ್ನೆನ್ನವರ, ಮಹೇಶ ಕುಲಗುಡೆ, ಮೋಹನ ರಾಜಮಾನೆ, ಅನಿಲ ಕೊರವಿ ಇತರರು ಇದ್ದರು.