ನಿಪ್ಪಾಣಿಯ ಸಾಖರವಾಡಿ ಭಾಗದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಅಮಿತ ಸಾಳ್ವೆ, ಜೀಜಾಬಾಯಿ ರಾವುತ, ಶಿಲ್ಪಾ ಖರಾಡೆ ಇತರರಿದ್ದರು. 
ಬೆಳಗಾವಿ

ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬದ್ಧ

ರಾಘವೇಂದ್ರಗೌಡ ಭೀ ಪಾಟೀಲ್
ನಿಪ್ಪಾಣಿ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಗರದಲ್ಲಿ ಐದು ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಸಾಖರವಾಡಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ನಗರದಲ್ಲಿ ಈಗಾಗಲೇ 5 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದರು.
ಸಾಖರವಾಡಿಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹನುಮಾನ ಮಂದಿರ ನಿರ್ಮಾಣಕ್ಕಾಗಿ 40 ಲಕ್ಷ ರೂ., ಗ್ರಾಮೀಣ ಭಾಗದ 300 ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ 1.5 ಲಕ್ಷ ರೂ. ಅನುದಾನ ನೀಡಲಾಗಿದೆ. ಘರಕುಲ ಯೋಜನೆಯಡಿ 200 ಮನೆ ನಿರ್ಮಿಸಲಾಗಿದ್ದು, ಅರ್ಜಿ ಸಲ್ಲಿಸಿದವರಿಗೆ ಮನೆ ಒದಗಿಸಲಾಗುತ್ತದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಅಮಿತ ಸಾಳವೆ, ಬಿಜೆಪಿ ಶಹರ ಅಧ್ಯಕ್ಷ ರಾಜು ಗುಂಡೆಷಾ, ಮಾಜಿ ನಗರಾಧ್ಯಕ್ಷ ಜಯವಂತ ಭಾಟಲೆ ಮಾತನಾಡಿದರು. ಅಶೋಕ ರಾವುತ, ಗಣೇಶ ಲೋಹಾರ, ಪ್ರದೀಪ ಲೋಹಾರ, ಸಂಗ್ರಾಮ ಚೌಹಾಣ, ಹೇಮಂತ ಚೌಗಲೆ, ಅನಿಲ ಚಾವರೇಕರ, ಶಿಲ್ಪಾ ಖರಾಡೆ ಇತರರಿದ್ದರು. ಸುನೀಲ ಕೊಪಾರ್ಡೆ ನಿರೂಪಿಸಿದರು. ಸಂದೀಪ ಪಾಟೀಲ ವಂದಿಸಿದರು.