ಜಾಗನೂರ ಗ್ರಾಮದ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು. ಸದಾಶಿವ ಘೋರ್ಪಡೆ, ಸೀತಾರಾಮ ಕುಲಕರ್ಣಿ, ಸುರೇಶ ಬೆಲ್ಲದ ಇತರರಿದ್ದರು.
ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ 65 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದಾಗ್ಯೂ ಕುಡಿಯುವ ನೀರಿನ ಸಮಸ್ಯೆ ಗಮನಿಸಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದರು.
ಜಾಗನೂರು ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯಿತಿ ವಿಶೇಷ ಯೋಜನೆಯಡಿ 40 ಲಕ್ಷ ರೂ. ಮೊತ್ತದಲ್ಲಿ ರಸ್ತೆ ಸುಧಾರಣೆ, ಎಸ್ಸಿ, ಎಸ್ಟಿ ಕಾಲನಿಯಲ್ಲಿ 25 ಲಕ್ಷ ರೂ. ಮೊತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಮುಖಂಡರಾದ ಸದಾಶಿವ ಘೋರ್ಪಡೆ,
ಸೀತಾರಾಮ ಕುಲಕರ್ಣಿ, ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ಹನುಮಂತ ರಬಕವಿ, ಲಕ್ಷ್ಮಣ ಹನುಮನ್ನವರ, ಸಿದ್ದು ಖಿಂಡಿ, ಮಲ್ಲೇಶ ಹನುಮಂತಗೋಳ, ಮಹಾಂತೇಶ ಶಿರಗೂರ, ಮಾಳಪ್ಪ ಗೊರಗುದ್ದಿ,