ತೋಪಿನಕಟ್ಟಿಯಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮದಲ್ಲಿ ಅನಿತಾ ಮುರಗೋಡ, ಡಾ.ಮಂಜುನಾಥ ಚೌರಡ್ಡಿ, ಡಾ.ಎಸ್.ಎಸ್.ಹಿರೇಮಠ, ಎಸ್.ಎಂ.ವಾರದ, ಜಿ.ಬಿ.ವಿಶ್ವನಾಥ ಇತರರಿದ್ದರು. 
ಬೆಳಗಾವಿ

ರೈತರ ಅಭಿವೃದ್ಧಿಗೆ ಸಮಗ್ರ ಮಾರ್ಗದರ್ಶನ ನೀಡಲು ಬದ್ಧ

ಬೆಳಗಾವಿ: ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಖಾನಾಪುರ ತಾಲೂಕು ಕೃಷಿ ಇಲಾಖೆಯಿಂದ ಖಾನಾಪುರ ತಾಲೂಕಿನ ತೋಪಿನಕಟ್ಟಿ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗ್ರಾಪಂ ಅಧ್ಯಕ್ಷೆ ಅನಿತಾ ಮುರಗೋಡ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ, ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್.ಎಸ್.ಹಿರೇಮಠ, ಎಸ್.ಎಂ.ವಾರದ, ಜಿ.ಬಿ.ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ ಭಾಗವಹಿಸಿ, ಗ್ರಾಮದಲ್ಲಿ ಕೃಷಿ ಕ್ಷೇತ್ರಗಳಲ್ಲಿ ಬೆಳೆಯುವ ಬೆಳೆಗಳು, ಬೆಳೆ ಪದ್ಧತಿಗಳು, ಸಾಗುವಳಿ ಕ್ಷೇತ್ರ, ನೀರಾವರಿ, ಮಣ್ಣಿನ ಆರೋಗ್ಯ ರೋಗ/ಕೀಟ ಬಾಧೆ, ಪಶುಸಂಗೋಪನೆ ಹಾಗೂ ಬೆಳೆಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಮಾಹಿತಿ ಸಂಗ್ರಹಿಸಿದರು.
ಗೋಡಂಬಿ, ಕಬ್ಬು, ಮೆಣಸಿನಕಾಯಿ, ಭತ್ತದ ಬೆಳೆಗಳಲ್ಲಿ ತಂತ್ರಜ್ಞಾನದ ಅಳವಡಿಸಿ ಇಳುವರಿ ಹೆಚ್ಚಿಸುವುದರ ಮೂಲಕ ಈ ಭಾಗದ ರೈತರ ಶ್ರೇಯೋಭಿವೃದ್ಧಿಗೆ ಕೃಷಿ ವಿಜ್ಞಾನ ಕೇಂದ್ರವು ಸನ್ನದ್ಧವಾಗಿದೆ ಎಂದು ಡಾ.ಮಂಜುನಾಥ ಚೌರಡ್ಡಿ ತಿಳಿಸಿದರು.
ಖಾನಾಪುರ ಕೃಷಿ ಇಲಾಖೆ ಆತ್ಮಾ ಯೋಜನೆಯ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ ಕುಸಗಲ್ಲ ಕೃಷಿ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪಿಡಿಒ ರಾಜಾರಾಂ ಇತರರಿದ್ದರು.