ಹುಕ್ಕೇರಿ ಕೃಷಿ ಇಲಾಖೆ ಆವರಣದಲ್ಲಿ ಮುಂಗಾರು ಹಂಗಾಮಿನ ಸೋಯಾಬೀನ್ ಬೀಜಗಳನ್ನು ಶಾಸಕ ನಿಖಿಲ ಕತ್ತಿ ರೈತರಿಗೆ ವಿತರಿಸಿದರು. ಸತ್ಯಪ್ಪ ನಾಯಿಕ, ರಾಚಯ್ಯ ಹಿರೇಮಠ, ಗುರುರಾಜ ಕುಲಕರ್ಣಿ, ಎ.ಕೆ.ಪಾಟೀಲ, ಆರ್.ಬಿ.ನಾಯ್ಕರ ಇತರರಿದ್ದರು. 
ಬೆಳಗಾವಿ

ರೈತರ ಬೇಡಿಕೆ ಈಡೇರಿಸಲು ಬದ್ಧ

ಪ್ರಮುಖ ಮುಖ್ಯಾಂಶಗಳು

  • ಶಾಸಕ ನಿಖಿಲ ಕತ್ತಿ ಭರವಸೆ
  • ಸೋಯಾಬೀನ್ ಬೀಜ ವಿತರಣೆ
ಹುಕ್ಕೇರಿ: ನೆಲದ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ಪ್ರತಿ ವರ್ಷದ ವಾಡಿಕೆಗಿಂತ ಶೇ.೨೫ರಷ್ಟು ಮಳೆ ಕೊರತೆ ಆಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸ್ಥಳೀಯ ಕೃಷಿ ಇಲಾಖೆಯಲ್ಲಿ ಶುಕ್ರವಾರ ರೈತರಿಗೆ ಸೋಯಾಬೀನ್ ಬೀಜ ವಿತರಿಸಿ ಮಾತನಾಡಿದರು. ತಾಲೂಕಿನಲ್ಲಿ  ೭,೫೦೦ ಕ್ವಿಂಟಾಲ್ ಸೋಯಾಬೀನ್, ೧೮.೪ ಕ್ವಿಂಟಾಲ್ ಗೋವಿನ ಜೋಳ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಹೆಚ್ಚಿಸಲು ಕೃಷಿ ಇಲಾಖೆ ಸನ್ನದ್ಧ ಆಗಿದೆ. 
ತಾಲೂಕಿನ ೩೯ ಪಿಕೆಪಿಎಸ್ ಮತ್ತು ೩ ರೈತ ಸಂಪರ್ಕ ಕೇಂದ್ರ ಸೇರಿದಂತೆ ೪೨ ಸ್ಥಳಗಳಲ್ಲಿ ಬೀಜ ವಿತರಿಸಲಾಗುತ್ತಿದೆ. ರೈತರು ಬೀಜ ಖರೀದಿ ಮಾಡಲು ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ರಸಗೊಬ್ಬರ ಮತ್ತು ರಾಸಾಯನಿಕ ದಾಸ್ತಾನು ಪೂರ್ಣ ಪ್ರಮಾಣದಲ್ಲಿದೆ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಆರ್. ಬಿ.ನಾಯ್ಕರ ಮಾತನಾಡಿ, ರಸಗೊಬ್ಬರ ಮಾರಾಟಗಾರರು ಯೋಗ್ಯ ದರದಲ್ಲಿ ಗೊಬ್ಬರ ಮಾರಾಟ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೃಷಿಗೆ ಉತ್ತಮ ಸ್ಪಂದನೆ ಹಾಗೂ ಅಧಿಕಾರಿಗಳ ಸಮರ್ಪಕ ಸೇವೆ ಗಮನಿಸಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಕೃಷಿ ಇಲಾಖೆಗೆ ಪ್ರಥಮ ಹಾಗೂ ಜಿಲ್ಲೆಗೆ ಹುಕ್ಕೇರಿ ತಾಲೂಕು ಪ್ರಥಮ ಎಂದು ಪ್ರಶಸ್ತಿ ಸಹಿತ ಪ್ರಮಾಣ ಪತ್ರ ನೀಡಿರುವುದನ್ನು ಶಾಸಕರು ಶ್ಲಾಘಿಸಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಎ.ಕೆ.ಪಾಟೀಲ, ಬಸವರಾಜ ಪಾಟೀಲ, ಶಿವನಗೌಡ ಪಾಟೀಲ, ಚನ್ನಪ್ಪ ಗಜಬರ, ಆನಂದ ಲಕ್ಕುಂಡಿ, ರಾಜು ಚೌಗಲಾ, ಗಿರೀಶ ಕುಲಕರ್ಣಿ, ರಾಜು ಮುನ್ನೋಳಿ, ಕೃಷಿ ಇಲಾಖೆ ಸಿಬ್ಬಂದಿ ರಾಘವೇಂದ್ರ ತಳವಾರ, ಶಿವಾನಂದ ಕಮತ, ಉದಯ ಆಗನೂರ, ಸಮೀರ ಲೋಕಾಪುರ, ಲಗಮಣ್ಣ ಹೂಲಿಕಟ್ಟಿ ಇತರರಿದ್ದರು.