ಹಿಂದೂ ಧರ್ಮ ಜಾಗೃತಿ ಮತ್ತು ಲವ್ ಜಿಹಾದ್ ಅರಿವು ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿವಾಚಾರ್ಯರು, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ವಿವೇಕ ಪುರಾಣಿಕ, ಶಿವರಾಜ ಅಂಬಾರಿ ಇತರರಿದ್ದರು.
- ಚಂದ್ರಶೇಖರ ಶಿವಾಚಾರ್ಯರ ಹೇಳಿಕೆ
- ಲವ್ ಜಿಹಾದ್ ಅರಿವು ಕಾರ್ಯಕ್ರಮ
- ದಿನಕ್ಕೆ ೫ ಸಾವಿರ ಪ್ರಕರಣ
- ಹಿಂದೂಗಳ ಸಂಖ್ಯೆ ಶೇ.೯೩ರಿಂದ ಶೇ.೭೦ಕ್ಕೆ ಕುಸಿತ
ಹುಕ್ಕೇರಿ: ಯುವತಿಯರನ್ನು ದಾರಿ ತಪ್ಪಿಸುವ ಕಾರ್ಯಗಳಾಗುತ್ತಿದ್ದು, ಹಿಂದೂ ಮಹಿಳೆಯರ ಸಂರಕ್ಷಣೆ ಅವಶ್ಯವಾಗಿದೆ. ಸನಾತನ ಸಂಸ್ಕೃತಿ ಆಚಾರ, ವಿಚಾರ ಉಳಿಸಿ ಬೆಳೆಸಿದಲ್ಲಿ ಲವ್ ಜಿಹಾದ್‌ನಂತಹ ಪ್ರಕರಣ ಕಡಿಮೆ ಆಗುತ್ತವೆ ಎಂದು ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಬೈಪಾಸ್ ರಸ್ತೆಯ ಲಕ್ಷ್ಮಿ ದೇವಸ್ಥಾನದಲ್ಲಿ ಭಾನುವಾರ ಶ್ರೀರಾಮ ಸೇನೆ ಆಯೋಜಿಸಿದ್ದ ಹಿಂದೂ ಧರ್ಮ ಜಾಗೃತಿ ಮತ್ತು ಲವ್ ಜಿಹಾದ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ದುರ್ಬಳಕೆಯಿಂದ ಹೆಣ್ಣು ಮಕ್ಕಳ ಜೀವನ ಹಾಳಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಅವಶ್ಯ ಎಂದರು.
ಸತ್ಯ ಪ್ರಬೋದೇಂದ್ರ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ದಿನಕ್ಕೆ ೫ ಸಾವಿರ ಲವ್ ಜಿಹಾದ್ ಪ್ರಕರಣ ವರದಿಯಾಗುತ್ತಿವೆ. ಹಿಂದೂ ಹೆಣ್ಣು ಮಕ್ಕಳಲ್ಲಿ ಮಾನಸಿಕ, ನೈತಿಕ ಸೈರ್ಯ ತುಂಬಲು ವಿಶೇಷ ಕಾರ್ಯಾಗಾರಗಳ ಅವಶ್ಯವಿದೆ ಎಂದರು.
ಹೃದಯ ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ೨೦೦೯ರಲ್ಲಿ ಕೇರಳದ ಹೈಕೋರ್ಟ್ ನೇಮಕ ಮಾಡಿದ್ದ ಲವ್ ಜಿಹಾದ್ ಪ್ರಕರಣಗಳ ಸತ್ಯ ಶೋಧನಾ ಸಮಿತಿಯ ಸದಸ್ಯೆಯಾಗಿದ್ದೆ. ಅಧ್ಯಯನದಲ್ಲಿ ಡ್ರಗ್ಸ್ ಮೂಲಕ ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದ ಸಂಗತಿ ಗೊತ್ತಾಯಿತು. ಪ್ರಸ್ತುತ ೨೨ ಕೋಟಿಯಷ್ಟು ಹಿಂದೂಗಳ ಸಂಖ್ಯೆ ಕಡಿಮೆ ಆಗಿದೆ. ಶೇ.೯೩ರಷ್ಟಿದ್ದ ಹಿಂದೂಗಳು ಸಂಖ್ಯೆ ಶೇ.೭೦ಕ್ಕೆ ಇಳಿದಿದೆ. ಹಿಂದೂ ಹೆಣ್ಣುಮಕ್ಕಳು ಎಚ್ಚರಗೊಳ್ಳಬೇಕು ಎಂದರು.
ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಮಾತನಾಡಿ, ಈ ಕಾರ್ಯಕ್ರಮ ತಡೆಯಲು ಪೊಲೀಸ್ ಇಲಾಖೆ ಹಲವಾರು ತಂತ್ರಗಳ ಜತೆಗೆ ೧೪೪ ಕಲಂ ಜಾರಿ ಮಾಡಿತ್ತು. ಆದರೆ, ಗೊಡ್ಡ ಬೆದರಿಕೆಗಳಿಗೆ ಹೆದರದೇ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದುವೇ ಹಿಂದೂ ಧರ್ಮದ ಬಲಿಷ್ಠತೆಗೆ ಸಾಕ್ಷಿ. ಲವ್ ಜಿಹಾದ್ ಸಹಾಯವಾಣಿ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಸಹಸ್ರಾರು ಫೋನ್ ಕರೆ ಬಂದಿವೆ. ಇದು ಲವ್ ಜಿಹಾದ್ ಗಂಭೀರತೆಗೆ ನಿದರ್ಶನ ಎಂದರು.
ವಿವೇಕ ಪುರಾಣಿಕ, ಶಿವರಾಜ ಅಂಬಾರಿ, ಪ್ರೊ.ವಿಜಯಲಕ್ಷ್ಮಿ ಬಳೋಬಾಳ, ಸುಭಾಸ ಕಾಸರಕರ, ಶ್ವೇತಾ ಮುಗಳಿ ಇತರರಿದ್ದರು. ಹಿಂದೂ ಧರ್ಮ ಜಾಗೃತಿ ಮತ್ತು ಲವ್ ಜಿಹಾದ್ ಅರಿವು ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿವಾಚಾರ್ಯರು, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ವಿವೇಕ ಪುರಾಣಿಕ, ಶಿವರಾಜ ಅಂಬಾರಿ ಇತರರಿದ್ದರು.