ಬೆಳಗಾವಿ ನಗರದಲ್ಲಿ ಈಚೆಗೆ ಗಾಲ್ಫ್ ಲೀಗ್ ಟೂರ್ನಾಮೆಂಟ್‌ನಲ್ಲಿ ಕ್ಲೌಡ್ 9 ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. 
ಬೆಳಗಾವಿ

ಕ್ಲೌಡ್ 9 ಟೈಗರ್ಸ್‌ಗೆ ಚಾಂಪಿಯನ್ ಪಟ್ಟ

ಶಂಕರ ಗೆಜ್ಜಿ
ಬೆಳಗಾವಿ: ಸ್ಥಳೀಯ ಒಲಿವ್ ಗ್ರೀನ್ಸ್ ಗಾಲ್ಫ್ ಕೋರ್ಸ್‌ನಲ್ಲಿ ಈಚೆಗೆ ಆಯೋಜಿಸಿದ್ದ ಒಲಿವ್ ಗ್ರೀನ್ಸ್ ಗಾಲ್ಫ್ ಲೀಗ್ (ಒಜಿಜಿಎಲ್) ಸೀಸನ್-1 ಯಶಸ್ವಿಯಾಗಿ ಸಮಾಪ್ತಿಗೊಂಡಿದ್ದು, ಕ್ಲೌಡ್ 9 ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆದ ಈ ಲೀಗ್‌ಗಾಗಿ ಮಾ.13ರಂದು ನಡೆದ ಪ್ಲೇಯರ್ಸ್ ಹರಾಜು ಪ್ರಕ್ರಿಯೆ ಮೂಲಕ 100 ಆಟಗಾರರನ್ನೊಳಗೊಂಡ ಎಂಟು ಫ್ರಾಂಚೈಸಿ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಪಂದ್ಯ ಫೋರ್ ಬಾಲ್, ಸ್ಟ್ರೋಕ್ ಪ್ಲೇ ಹಾಗೂ ಮ್ಯಾಚ್‌ಪ್ಲೇ ಮಾದರಿಯಲ್ಲಿ ನಡೆಯಿತು.
ಬೆಳಗಾವಿ, ಹುಬ್ಬಳ್ಳಿ, ಕೊಲ್ಲಾಪುರ ಮತ್ತು ಗೋವಾದ ಪುರುಷರು ಮತ್ತು ಮಹಿಳಾ ಆಟಗಾರರು ಭಾಗವಹಿಸಿದ್ದರು. ಎಲ್ಲ ತಂಡಗಳೂ ತೀವ್ರ ಪೈಪೋಟಿ ನಡೆಸಿದರೂ ಕ್ಲೌಡ್ 9 ಟೈಗರ್ಸ್ ತಂಡವು ಕಿರೀಟ ತನ್ನದಾಗಿಸಿಕೊಂಡಿತು.
ವಿಜೇತ ತಂಡದ ಮಾಲೀಕರಾಗಿ ಡಾ.ಅರುಣ ಕಿಲ್ಲೇಕರ, ಮೇಜರ್ ಜನರಲ್ ರಾಕೇಶ ಮನೋಚಾ, ಕರ್ನಲ್ ಎ. ವಿವೇಕಾನಂದ, ಕರ್ನಲ್ ಎಸ್.ಎಸ್.ಭಾಟಿ, ಬಸವರಾಜ ಪಿ., ಗುರು ಪಿ., ಮಂಜುನಾಥ.ಪಿ., ಜಾಪ್ರೀನ್ ಡಿ., ರಾಜ್ ಡಿ., ಪ್ರಕಾಶ ಎಂ., ಅರವಿಂದ ಕೆ., ರಾಜೇಂದ್ರ ಕೆ. ಭಾಗವಹಿಸಿದ್ದರು. ಇಂತಹ ಟೂರ್ನಾಮೆಂಟ್ ಪ್ರತಿ ವರ್ಷ ಎರಡು ಬಾರಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.