ನಿಪ್ಪಾಣಿಯಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಡಾ.ವೈ.ಎಂ. ಯಾಕೊಳ್ಳಿ ಮಾತನಾಡಿದರು. ಆನಂದ ಪುರಾಣಿಕ, ಹೇಮಾ ಚಿಕ್ಕಮಠ, ಡಾ.ಎಂ.ಎಂ.ಹುರಳಿ ಇದ್ದರು.
ನಿಪ್ಪಾಣಿ: ಶಿಕ್ಷಣ ಕೇವಲ ಜ್ಞಾನಾರ್ಜನೆ ಸಾಧನವಲ್ಲ, ಅದು ವ್ಯಕ್ತಿತ್ವ ನಿರ್ಮಾಣ, ಮೌಲ್ಯಗಳ ಬೆಳವಣಿಗೆ ಹಾಗೂ ಸಮಾಜದ ಪರಿವರ್ತನೆಯ ದಾರಿದೀಪ ಎಂದು ನಿವೃತ್ತ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ಆಯೋಜಿಸಿದ್ದ ಈಚೆಗೆ ಶಿಕ್ಷಕರ ದಿನಾಚರಣೆ ಹಾಗೂ ಕೃಷ್ಣಮೂರ್ತಿ ಪುರಾಣಿಕ ಜನ್ಮದಿನದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ಕೃಷ್ಣಮೂರ್ತಿ ಪುರಾಣಿಕ ಸಾಹಿತ್ಯ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಶಿಕ್ಷಣಕ್ಕೆ ಮಾನವೀಯ ಸ್ಪರ್ಶ ನೀಡುವ ಶಕ್ತಿ ಹೊಂದಿವೆ. ಕೃಷ್ಣಮೂರ್ತಿ ಪುರಾಣಿಕರ ಸಾಹಿತ್ಯ ಸಮಾಜದ ವಾಸ್ತವತೆ ಪ್ರತಿಬಿಂಬಿಸುವ ಜತೆಗೆ ಓದುಗರಲ್ಲಿ ಉತ್ತಮ ಚಿಂತನೆ, ಜೀವನ ಪ್ರಜ್ಞೆ ಹಾಗೂ ಮೌಲ್ಯಾಧಾರಿತ ಬದುಕಿನ ಅರಿವು ಮೂಡಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ ಮತ್ತು ಕೌಶಲದೊಂದಿಗೆ ಮಾನವೀಯ ಮೌಲ್ಯಗಳಿಗೂ ಆದ್ಯತೆ ನೀಡಬೇಕಿದೆ ಎಂದರು.
ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಜ್ಞಾನ ನೀಡುವುದರ ಜತೆಗೆ ಉತ್ತಮ ಸಂಸ್ಕಾರ, ಶಿಸ್ತು, ನೈತಿಕತೆ ಮತ್ತು ಮಾನವೀಯ ಮೌಲ್ಯ ಬೆಳೆಯಬೇಕಿದೆ ಎಂದರು. ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಡಾ.ಎಂ.ಡಿ.ಗುರವ, ಡಾ.ಎಸ್.ಎಂ.ರಾಯಮಾನೆ, ಆನಂದ ಪುರಾಣಿಕ, ಪ್ರೊ.ಶಂಕರಮೂರ್ತಿ ಕೆ.ಎನ್., ಡಾ.ತೇಜಸ್ವಿನಿ ನಂದಿ, ಡಾ.ಆನಂದ ಕೆಂಚಕ್ಕನವರ, ಡಾ.ಶಶಿಧರ ಕುಂಬಾರ, ಮಿಥುನ ಅಂಕಲಿ, ಡಾ.ಎಸ್.ಆರ್.ಹುನ್ನರಗಿ, ಶಿವಲಿಂಗ ನಾಯಿಕ, ಎಸ್.ಎಸ್.ಸುನ್ನಾಳ, ಬಿ.ಎಂ.ಜನಗೌಡ, ಎಸ್.ಎಸ್.ಘೋರ್ಪಡೆ, ನಾಗರಾಜ ಬೆಳಗಾಂವಕರ ಇತರರಿದ್ದರು. ಆರತಿ ಪಾಟೀಲ ನಿರೂಪಿಸಿದರು. ಮಾಯಾ ಭಾನಸೆ ವಂದಿಸಿದರು.