ಹಾರುಗೊಪ್ಪ ಗ್ರಾಮದ ಉಳವಿ ಚನ್ನಬಸವೇಶ್ವರ ಮಹಾರಥೋತ್ಸವ ಭಾನುವಾರ ವಿಜಂಭಣೆಯಿಂದ ನೆರವೇರಿತು.
ಹರ ಹರ ಮಹಾದೇವ, ಉಳವಿ ಚನ್ನಬಸವೇಶ್ವರ ಮಹಾರಾಜ ಕೀ ಜೈ ಎಂಬ ಜಯೋಷ ಮೊಳಗಿದವು. ಭಕ್ತರು ಹೂವು, ಹಣ್ಣು, ಕಾರೀಕುಗಳನ್ನು ರಥಕ್ಕೆ ಎಸೆದು ಹರಕೆತೀರಿಸಿದರು. ದೇವಸ್ಥಾನದಲ್ಲಿ ನಂದಿ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ಆನೆ, ಕುಂಭಮೆರವಣಿಗೆ, ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು,
ಅರಬಾವಿ ಪುಣ್ಯಾರಣ್ಯ ಮಠದ ಗುರುಬಸವಲಿಂಗ ಸ್ವಾಮೀಜಿ ನೇತತ್ವ ವಹಿಸಿದ್ದರು. ರಥದ ಮುಂದೆ ಪುರವಂತರು ಒಡಪು ಹೇಳಿದರು. ಬಸವೇಶ್ವರ ಕರಡಿಮಜಲು, ಬೀರೇಶ್ವರ ಡೊಳ್ಳಿನ ಮಜಲು ಹಾಗೂ ಉಳವಿ ಚನ್ನಬಸವೇಶ್ವರ ಭಜನಾ ತಂಡಗಳ ಸೇವೆಯೊಂದಿಗೆ ರಥ ಮುಂದೆಸಾಗಿತು. ಮಾತೋಶ್ರೀ ಶಿವಯೋಗಿನಿದೇವಿ, ಬಸವರಾಜ ಕೌಜಲಗಿ, ಸಂತೋಷ ಜಾರಕಿಹೊಳಿ, ಉಳವಿ ಚನ್ನಬಸವೇಶ್ವರ ಯುವಕ ಮಂಡಳದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಜಾತ್ರಾ ಕಮಿಟಿಯವರು ಪಾಲ್ಗೊಂಡಿದ್ದರು.