ಕಕಮರಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಜ್ಞಾನಕುಟೀರದ ವಾರ್ಷಿಕೋತ್ಸವ ಸಪ್ತಾಹ ಕಾರ್ಯಕ್ರಮದಲ್ಲಿ ಚಿದಾನಂದ ಸವದಿ ಮಾತನಾಡಿದರು. ಶಶಿಕಾಂತ ಗುರೂಜಿ, ತಾರಾಚಂದ ಮಹಾರಾಜರು, ಮುಕುಂದ ಮಹಾರಾಜರು, ಯೋಗೇಶ್ವರಿ ಮಾತಾಜಿ ಇತರರಿದ್ದರು.
ಕಕಮರಿ: ಮಠ, ಮಂದಿರಗಳಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಥಣಿ ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮೇಶ್ವರ ಜ್ಞಾನಕುಟೀರದ ವಾರ್ಷಿಕೋತ್ಸವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ತಂದೆ-ತಾಯಿ ಸೇವೆ ನಿಜವಾದ ಧರ್ಮ. ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಸತ್ಕಾರ್ಯಕ್ಕೆ ಬಳಸಬೇಕು. ಆಶ್ರಮಕ್ಕೆ ಅವಶ್ಯವಿರುವ ಪ್ರಸಾದ ನಿಲಯ ನಿರ್ಮಾಣಕ್ಕೆ ೧೦ ಲಕ್ಷ ರೂ. ಶಾಸಕರ ಅನುದಾನದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಖೋಜನವಾಡಿ ಶಶಿಕಾಂತ ಗುರೂಜಿ ಮಾತನಾಡಿ, ಮನಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಏಕಾಗ್ರತೆಯಿಂದ ಧ್ಯಾನ ಮಾಡಬೇಕು. ದೇವರ ನಾಮಸ್ಮರಣೆಯಲ್ಲಿ ಆಗಾಧ ಶಕ್ತಿ ಅಡಗಿದೆ ಎಂದರು.
ತಾರಾಚಂದ ಮಹಾರಾಜರು ಆಶೀರ್ವಚನ ನೀಡಿದರು. ಇಂಚಗೇರಿ ಮುಕುಂದ ಮಹಾರಾಜರು, ಯೋಗೇಶ್ವರಿ ಮಾತಾಜಿ, ಈರಣ್ಣ ಶಾಸ್ತ್ರೀ, ಅರವಿಂದ ಮಹಾರಾಜರು, ಪ್ರಕಾಶ ಮಹಾರಾಜರು, ಅಪ್ಪುಗೌಡ ಪಾಟೀಲ, ಗುರಪ್ಪ ದಾಶ್ಯಾಳ, ಗ್ರಾಪಂ ಅಧ್ಯಕ್ಷೆ ಪಲ್ಲವಿ ವಾಲಿ, ಪಿಡಿಒ ಪುಷ್ಪಾ ಜನಗೌಡ, ಈರಪ್ಪ ಶಿರಗುಪ್ಪಿ, ರಾಮಣ್ಣ ಆಜೂರ, ಈರಪ್ಪ ದುಂಡಿ, ಮಲ್ಲಿಕಾರ್ಜುನ ಜನಗೌಡ, ಗುರು ಮಣ್ಣೂರ, ಮಲ್ಲಿಕಾರ್ಜುನ ಜನಗೌಡ, ಇತರರಿದ್ದರು. ಅಪ್ಪಾಸಾಬ ಚಿಗದೊಳ್ಳಿ ನಿರೂಪಿಸಿದರು.