ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಉಪನ್ಯಾಸಕ ಡಾ.ಬಿ.ಕಿಶೋರ ಮಾತನಾಡಿದರು. ಜೆ.ಬಿ.ಮೇಟಿ, ಎಂ.ಎಸ್.ಮರನೂರ ಇತರರಿದ್ದರು. 
ಬೆಳಗಾವಿ

ಚಂದರಗಿಯ ಕ್ರೀಡಾ ವಸತಿ ಶಾಲೆ ಮಾದರಿ

ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
2025ನೇ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಸಂಸ್ಥೆಗಳು ಯಾವವು? ಅವು ಏಕೆ ಮುಖ್ಯ? ಮತ್ತು ಸಮುದಾಯ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಬಹುದು ಎಂಬ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
ಚಂದರಗಿಯ ಕ್ರೀಡಾ ವಸತಿ ಶಾಲೆ ದೇಶದಲ್ಲೇ ಸಹಕಾರ ತತ್ತ್ವದಲ್ಲಿ ಸ್ಥಾಪಿಸಿರುವ ಏಕೈಕ ಕ್ರೀಡಾ ವಸತಿ ಶಾಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯವಸ್ಥಾಪಕ ಜೆ.ಬಿ.ಮೇಟಿ, ಕ್ರೀಡಾ ಸಲಹೆಗಾರ ಎಂ.ಎಸ್.ಮರನೂರ ಇತರರಿದ್ದರು. ಶಿಕ್ಷಕ ಕೆ.ವಿ.ಪಮ್ಮಾರ ನಿರೂಪಿಸಿದರು. ಪ್ರಾಚಾರ್ಯ ಪಿ.ಕೆ.ಪಾಟೀಲ ಪರಿಚಯಿಸಿದರು. ಐ.ಎಸ್.ಸೂಳಿಭಾವಿ ವಂದಿಸಿದರು.