ಮರಕುಂಬಿ ಗ್ರಾಮದಲ್ಲಿ ಶ್ರೀ ಚಕ್ರ ಸಮೇತ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದ ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಜಿ.ಬಿ.ಮಲ್ಲೇಶ, ಮಹಾಂತೇಶ ಕೌಜಲಗಿ, ರಾಹುಲ ಕೌಜಲಗಿ ಇತರರಿದ್ದರು. 
ಬೆಳಗಾವಿ

ಚಾಮುಂಡೇಶ್ವರಿ ಜಾತ್ರೆ ಭಾನುವಾರದಿಂದ

ರಾಘವೇಂದ್ರಗೌಡ ಭೀ ಪಾಟೀಲ್
ತಾಲೂಕಿನ ಮರಕುಂಬಿ ಗ್ರಾಮದ ಶ್ರೀ ಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.4ರಂದು ಇಂಚಲದಿಂದ ಗ್ರಾಮ ದೇವತೆಗಳನ್ನು ತರುವುದು. ಜ.5ರಂದು 55 ಗ್ರಾಮಗಳಿಂದ ಸುಮಾರು 75 ಪಲ್ಲಕ್ಕಿ ದೇವರುಗಳನ್ನು ಬರ ಮಾಡಿಕೊಳ್ಳಲಾಗುವುದು. ಜ.6ರಂದು ಎಲ್ಲ ದೇವತೆಗಳಿಗೆ ಉಡಿ ತುಂಬುವುದು, ಮಹಾ ಚಂಡಿಕಾ ಹೋಮ ಹಾಗೂ ಸಾಮೂಹಿಕ ವಿವಾಹಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಜ.7ರಂದು ಬೈಲಹೊಂಗಲ ಎಪಿಎಂಸಿ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿವಿಧ ವಾದ್ಯಗಳೊಂದಿಗೆ ಮೈಸೂರು ದಸರಾ ಮಾದರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಅಂಬಾರಿ ಮೆರವಣಿಗೆ ಮರಕುಂಬಿ ಗ್ರಾಮದವರೆಗೆ ನಡೆಯಲಿದೆ. ಈಗಾಗಲೇ ಗ್ರಾಮದಲ್ಲಿ ಸೇವಾ ಸಮಿತಿ ಸಕಲ ಸಿದ್ಧತೆ ಕೈಗೊಂಡಿದ್ದು, ನಿರಂತರ ಪೂಜೆ, ಪ್ರಾರ್ಥನೆ, ಹೋಮ, ಹವನ, ನಿತ್ಯ ದಾಸೋಹ ಹಾಗೂ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದರು.
ಸುಮಾರು 9 ತಿಂಗಳ ಹಿಂದೆ ಶ್ರೀ ಚಕ್ರ ಹಾಗೂ ಶ್ರೀ ಲಕ್ಷ್ಮೀ ಸಾಲಿಗ್ರಾಮ ಸ್ಥಾಪಿತ ಈ ಜಾಗೃತ ಸನ್ನಿಧಾನ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಸ್ಥಾನದ ಆವರಣದಲ್ಲಿ 179 ಅಡಿ ಎತ್ತರದ ಶಿವಲಿಂಗ ಮೂರ್ತಿ, ನಾಲ್ಕು ಅಡಿ ಗದ್ದುಗೆ ಮೂರ್ತಿ ಸುಮಾರು 2030ಕ್ಕೆ ಲೋಕಾರ್ಪಣೆಗೊಳ್ಳಲಿವೆ ಎಂದು ವಿವರಿಸಿದರು.ಭೂದಾನಿ ಮಹಾಂತೇಶ ಕೌಜಲಗಿ, ಕಾರ್ಯದರ್ಶಿ ಜಿ.ಬಿ.ಬಾಬು, ರವಿ ಕುರಬೇಟ, ವಿರೂಪಾಕ್ಷ ವಾಲಿ, ಮಹಾಂತೇಶ ತುರಮರಿ, ರಾಹುಲ ಕೌಜಲಗಿ,
ಬಸನಗೌಡ ಪಾಟೀಲ ಇತರರಿದ್ದರು.