ಯಲ್ಲಮ್ಮನಗುಡ್ಡದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಭಕ್ತರನ್ನು ರಕ್ಷಿಸಿದ ಪ್ರವಾಸಿಮಿತ್ರ ಮತ್ತು ಗಹರಕ್ಷಕ ದಳದವರಿಗೆ ಪ್ರಭಾವತಿ ಫಕ್ಕೀರಪುರ ಪ್ರಶಂಸಾ ಪತ್ರ ವಿತರಿಸಿದರು. ಶಿವಾಜಿ ಕರಿಮುಖನವರ, ಗದಿಗೆಪ್ಪ ಕಂಕಣವಾಡಿ, ಮಹಾದೇವ ಹೊಸೂರ ಇದ್ದರು.
ಆಗಸ್ಟ್‌ನಲ್ಲಿ ಎದುರಾದ ಪ್ರವಾಹ ಸಂದರ್ಭದಲ್ಲಿ ಭಕ್ತರನ್ನು ಕಾಪಾಡಿದ್ದ ಪ್ರವಾಸಿ ಮಿತ್ರರು ಹಾಗೂ ಗಹರಕ್ಷಕ ದಳದ ಸಿಬ್ಬಂದಿಗೆ ಯಲ್ಲಮ್ಮ ದೇವಸ್ಥಾನ ಆಡಳಿತ ಮಂಡಳಿಯಿಂದ ಈಚೆಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
ಶಿವಾಜಿ ಕರಿಮುಖನವರ, ಗದಿಗೆಪ್ಪ ಕಂಕಣವಾಡಿ, ಮಹಾದೇವ ಹೊಸೂರ, ಯೋಗೇಶ ವಾಡಕರ, ಉಮೇಶ ನನದಗಿ, ನಾಗರಾಜ ಕರಿಮುಖನವರ ಭಕ್ತರನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು. ಪ್ರವಾಸಿ ಮಿತ್ರರು ಮತ್ತು ಗಹರಕ್ಷಕ ದಳದವರ ಕಾರ್ಯ ಮೆಚ್ಚಿ ಪ್ರಶಂಸಾ ಪತ್ರ ಕೊಡುತ್ತಿದ್ದೇವೆ ಎಂದು ಯಲ್ಲಮ್ಮ ದೇವಸ್ಥಾನ ಅಭಿವದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ಹೇಳಿದರು.
ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಶೀತಲ ಕಡಟ್ಟಿ, ಮಂಜುನಾಥ ಅಂಗಡಿ, ಜಗದೀಶ ರೇವಣ್ಣವರ, ಸಂಗಮೇಶ ಪಂಪನವರ, ಡಿ.ಆರ್.ಚೌಹಾಣ, ಎಂ.ಪಿ.ದ್ಯಾಮನಗೌಡ್ರ, ಸಂಜು ಕರಲಿಂಗನವರ ಇದ್ದರು.