ರಾಮದುರ್ಗ ನಗರದ ಶ್ರೀಮತಿ ಈರಮ್ಮ ಶಿವಲಿಂಗಪ್ಪ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನಗಣತಿ ತರಬೇತಿ ಕಾರ್ಯಾಗಾರವನ್ನು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಉದ್ಘಾಟಿಸಿದರು. ಈರಣ್ಣ ಗುಡದಾರಿ, ಎ.ವಿ.ಪಾಟೀಲ, ಸುರೇಶ ಅಣ್ಣಿಗೇರಿ ಇತರರಿದ್ದರು. 
ಬೆಳಗಾವಿ

ದೇಶದ ಅಭಿವೃದ್ಧಿಗೆ ಜನಗಣತಿ ದತ್ತಾಂಶ ಪೂರಕ

ರಾಮದುರ್ಗ: ದೇಶದ ಭವಿಷ್ಯ ರೂಪಿಸಲು ಜನಗಣತಿ ದತ್ತಾಂಶ ಪೂರಕವಾಗಿವೆ. ಗಣತಿ ಸಂದರ್ಭದಲ್ಲಿ ಗಣತಿದಾರರು ನೈಜ ಮಾಹಿತಿ ಜತೆಗೆ ಗಣತಿಯಿಂದ ಯಾವುದೇ ಪ್ರಜೆ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ನಗರದ ಶ್ರೀಮತಿ ಈರಮ್ಮ ಶಿವಲಿಂಗಪ್ಪ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನಗಣತಿ-2027ರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ 451 ಗಣತಿದಾರರು, 80 ಮೇಲ್ವಿಚಾರಕರು, ನಗರ ವ್ಯಾಪ್ತಿಯಲ್ಲಿ 74 ಗಣತಿದಾರರು, 13 ಮೇಲ್ವಿಚಾರಕರು ಸೇರಿ 705 ಗಣತಿದಾರರು, 93 ಮೇಲ್ವಿಚಾರಕರು ಉತ್ತಮ ತರಬೇತಿ ಪಡೆದು ದತ್ತಾಂಶ ಸಂಗ್ರಹಣೆಯಲ್ಲಿ ಎದುರಾಗುವ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತುದಾರರಾದ ಎ.ವಿ.ಪಾಟೀಲ, ಸುರೇಶ ಅಣ್ಣಿಗೇರಿ, ಡಾ.ಪ್ರಕಾಶ ತೆಗ್ಗಿಹಳ್ಳಿ, ಮಂಜುಳಾ ಮೂಡ್ಲವರ, ಎಂ.ಎನ್.ಭಜಂತ್ರಿ, ಎಸ್.ಐ.ಹೊಸೂರ ಇತರರಿದ್ದರು. ಕಂದಾಯ ನಿರೀಕ್ಷಕ ಮಹೇಶ ತೆಂಗಿನಕಾಯಿ ಸ್ವಾಗತಿಸಿದರು.