ಕಾಗವಾಡ: ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ, ಸ್ವಾತಂತ್ರ್ಯದ ಮಹತ್ವ ಸಾರುವ ನಿಟ್ಟಿನಲ್ಲಿ ಗ್ರಾಮದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಭಮಣ್ಣ ಚೌಗುಲೆ ಹೇಳಿದ್ದಾರೆ.
ಶಿರಗುಪ್ಪಿ ಗ್ರಾಮದಲ್ಲಿ ಶನಿವಾರ ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು 600 ಅಡಿ ಉದ್ದದ ಧ್ವಜ ಹಿಡಿದು ಘೋಷಣೆಯೊಂದಿಗೆ ವಿದ್ಯಾನಂದ ಶಾಲೆಯಿಂದ ತಿರಂಗಾ ಯಾತ್ರೆ ಆರಂಭವಾಗಿ ವಿವಿಧ ಮಾರ್ಗವಾಗಿ ಸಾಗಿ ಶಾಲೆಗೆ ಮರಳಿತು.
ರಮಾಕಾಂತ ಬಾಡಗೆ, ಶಿವಾನಂದ ನವಿನಾಳೆ, ಸುಭಾಸ ಮೋನೆ, ಮಹಾದೇವ ಗಣಾಚಾರಿ, ಸಚಿನ ಕಾಂಬಳೆ, ಮಾಜಿ ಸೈನಿಕ ಬಚ್ಚನ ಕುಪಾಟೆ, ಶಿಕ್ಷಕರಾದ ಎ.ಎಸ್.ಪಾಟೀಲ, ಉಜ್ವಲಾ ಮಗದುಮ್ಮ, ಐ.ಎಂ.ಬೇಗ, ಕೆ.ಪಿ.ಪವಾರ, ಸಂತೋಷ ಸಿ.ಎಸ್., ಮನೋಜ ಮಡಿವಾಳ, ಬಸವರಾಜ ಬೆಳ್ಳಂಕಿ, ಭಾರತಿ ರ್ನಾಕರ, ಪ್ರಸಾದ ಚಿಕ್ಕೋಡಿಕರ, ಪೂರ್ಣಿಮಾ ಕೆಂಚನ್ನವರ, ರಾಹುಲ ಕಂಬಾರ, ಮಾರುತಿ ಕಾಂಬಳೆ, ಬಿ.ಆರ್.ನರವಾಡೆ ಸೇರಿದಂತೆ ಸಿದ್ಧೇಶ್ವರ ವಿದ್ಯಾಲಯ, ಅರಿಹಂತ ಶಿಕ್ಷಣ ಸಂಸ್ಥೆ, ನ್ಯೂ ಇಂಗ್ಲಿಷ್ ಪ್ರಾಥಮಿಕ ಶಾಲೆ, ಸ್ವಾಮಿ ವಿವೇಕಾನಂದ ಇಂಗ್ಲಿಷ್ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ, ಉರ್ದು ಪ್ರೌಢಶಾಲೆ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.