ನಿಪ್ಪಾಣಿ: ಗಾಂಜಾ ಸೇವನೆ ಹಾಗೂ ಮಾರಾಟದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಶಹರ ಠಾಣೆ ಪೊಲೀಸರು 6 ಜನರ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ
ನಗರದ ಯರನಾಳ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಕೊಲ್ಹಾಪುರ ಜಿಲ್ಲೆಯ ಕರವೀರ ತಾಲೂಕಿನ ಉಜಳಾಯಿವಾಡಿ ಗ್ರಾಮದ ರಮೇಶ ಪರೀಟ, ಗಾಂಜಾ ಖರೀದಿಸಿದ ಸ್ಥಳೀಯ ಬುದ್ಧನಗರದ ಉಮೇಶ ಕಷ್ಣಾ ಕದಮ (27), ಶಿವಾಜಿನಗರದ ಅರ್ಜುನ ಪುಂಡಲೀಕ ಮೋಡಿಕರ (40), ಶುಭಂ ಶಾಮ ಹೆಗಡೆ (25), ಯರನಾಳ ರಸ್ತೆಯ ಅಭಿಜಿತ ರಾಜು ಪರಮಾರ (27) ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಧಿತರಿಂದ 25 ಸಾವಿರ ರೂ. ಮೌಲ್ಯದ 525 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸ್ಥಳೀಯ ಸ್ಮಶಾನಭೂಮಿ ಮಾರುತಿ ಮಂದಿರದ ಹತ್ತಿರವಿರುವ ಹಳ್ಳದ ಪಕ್ಕದಲ್ಲಿ ಗಾಂಜಾ ಸೇವಿಸಿದ ಬುದ್ಧನಗರದ ಪ್ರವೀಣ ಅಶೋಕ ಚೌಗುಲೆ (20) ವಿರುದ್ಧವೂ ಪ್ರಕರಣ ದಾಖಲಾಗಿದೆ.