ಬೆಳಗಾವಿಯ ಕೆಎಲ್ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ಲಿನಿಕಲ್ ರಿಸರ್ಚ್ನಲ್ಲಿ ವೃತ್ತಿ ಮಾರ್ಗ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಜುನಾಥ ಪಾಟೀಲ ಅವರನ್ನು ಡಾ.ಜೆ.ಎಸ್. ಕವಳೇಕರ್ ಸ್ವಾಗತಿಸಿದರು. ಡಿ.ಎಸ್.ಶೆಟ್ಟರ, ಮನಿಷಾ ಕೆ., ರಿತೀಶ ರೆಡ್ಡಿ ಇತರರಿದ್ದರು.
ಕ್ಲಿನಿಕಲ್ ರಿಸರ್ಚ್ ೇತ್ರದಲ್ಲಿ ಜೀವ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪದವೀಧರರಿಗೆ ವಿಪುಲ ವೃತ್ತಿ ಅವಕಾಶಗಳಿವೆ. ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದ ಜತೆಗೆ ಸಂವಹನ ಕೌಶಲ ಬೆಳೆಸಿಕೊಳ್ಳುವಂತೆ ಲ್ಯಾಬ್ಕಾರ್ಪ್ ಪೆವೆಟ್ ಲಿಮಿಟೆಡ್ನ ಗ್ಲೋಬಲ್ ಕ್ಲಿನಿಕಲ್ ಸೀನಿಯರ್ ಮ್ಯಾನೇಜರ್ ಮಂಜುನಾಥ ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆಎಲ್ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜೈವಿಕ ತಂತ್ರಜ್ಞಾನ ವಿಭಾಗ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಲಿನಿಕಲ್ ರಿಸರ್ಚ್ನಲ್ಲಿ ವೃತ್ತಿ ಮಾರ್ಗಗಳು ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಿನಿಕಲ್ ಡೇಟಾ ಮ್ಯಾನೇಜ್ಮೆಂಟ್, ಫಾರ್ಮಕೋವಿಜಿಲೆನ್ಸ್, ಕ್ಲಿನಿಕಲ್ ಡೇಟಾ ವಿಶ್ಲೇಷಣೆ, ನಿಯಂತ್ರಣ ವ್ಯವಹಾರಗಳು, ಕ್ಲಿನಿಕಲ್ ಟ್ರಯಲ್ ನಿರ್ವಹಣೆ ಸೇರಿದಂತೆ ಡೆ&ಲ್ಯಾಬ್ ೇತ್ರಗಳಲ್ಲಿನ ಉದ್ಯೋಗಾವಕಾಶ, ಕೃತಕ ಬುದ್ಧಿಮತ್ತೆ ಆಧಾರಿತ ಉದ್ಯೋಗಾವಕಾಶ ಕುರಿತು ವಿವರಿಸಿದರು.
ಜೈವಿಕ ತಂತ್ರಜ್ಞಾನದ ವಿಭಾಗದ ಮುಖ್ಯಸ್ಥೆ ಡಿ.ಎಸ್.ಶೆಟ್ಟರ, ಮನಿಷಾ ಕೆ., ರಿತೀಶ ರೆಡ್ಡಿ ಇತರರಿದ್ದರು.