ಡಿಜಿಟಲ್​ ಅರೆಸ್ಟ್​  
ಬೆಳಗಾವಿ

ಉದ್ಯಮಿಗೆ 15 ಕೋಟಿ ರೂ. ಸೈಬರ್​ ವಂಚನೆ

ಬೆಳಗಾವಿ: ಡಿಜಿಟಲ್​ ಅರೆಸ್ಟ್​ ಹೆಸರಿನಲ್ಲಿ ಸೈಬರ್​ ವಂಚನೆ ಜಾಲಕ್ಕೆ ಸಿಲುಕಿಸಿ ಉದ್ಯಮಿಯೋರ್ವಗೆ 15 ಕೋಟಿ ರೂ. ವಂಚಿಸಲಾಗಿದೆ.
ಸಿಬಿಐ, ಆರ್​ಬಿಐ ಅಧಿಕಾರಿಗಳೆಂದು ಉದ್ಯಮಿಗೆ ವಿಡಿಯೋ ಕಾಲ ಮಾಡಿರುವ ವಂಚಕರು, ಮನಿ ಲಾಂಡರಿಂಗ್​ ಫ್ರಾಡ್​ ಲೀಸ್ಟ್​ನಲ್ಲಿ ನಿಮ್ಮ ಹೆಸರು ತೋರಿಸುತ್ತಿದ್ದು , ನೀವು ಮನಿ ಲಾಂಡರಿಂಗ್​ ಮಾಡಿದ್ದೀರಿ ಎಂದು ಬೆದರಿಕೆ ಹಾಕಿದ್ದಾರೆ. ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ಅಕೌಂಟ್​ ನಂಬರ್​ ಕೊಟ್ಟು ಹಂತ& ಹಂತವಾಗಿ 15 ಕೋಟಿ ರೂ. ವರ್ಗಾಯಿಸಿಕೊಂಡಿದ್ದಾರೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ಮರಳಿಸುತ್ತೇವೆ ಎಂದಿದ್ದಾರೆ.
ಉದ್ಯಮಿಗೆ ಅನುಮಾನ ಬಾರದಂತೆ ಫೆಬ್ರವರಿಯಿಂದ ಮಾ.18ರವರೆಗೆ ನಿರಂತರವಾಗಿ ಹಣ ವರ್ಗಾವಣೆ ಪ್ರಕ್ರಿಯೆ ನಡೆಸಿದ್ದಾರೆ. ಸ್ವಲ್ಪ ದಿನದ ಬಳಿಕ ವಂಚಕರು ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂಡಿರುವ ಉದ್ಯಮಿ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"

ಮಾ.18ರಂದು ಡಿಜಿಟಲ್​ ಅರೆಸ್ಟ್​ ಪ್ರಕರಣ ದಾಖಲಾಗಿದ್ದು, ಸೈಬರ್​ ವಂಚಕರ ಅಕೌಂಟ್​ನಲ್ಲಿ 90 ಲಕ್ಷ ರೂ. ಪ್ರೀಜ್​ ಮಾಡಲಾಗಿದ್ದು, ವಂಚಕರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಬೆಳಗಾವಿ ನಗರದಲ್ಲಿ 2,999 ಬ್ಯಾಂಕ್​ ಖಾತೆ ದುರುಪಯೋಗ ಆಗುತ್ತಿರುವುದು ಬೆಳಕಿಗೆ ಬಂದಿದ್ದು, ಕೇಸ್​ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ.