ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಶೋಭಾಯಾತ್ರೆಯಲ್ಲಿ ಶಾಸಕ ಡಿ.ಎಂ.ಐಹೊಳೆ, ಭರತೇಶ ಬನವಣೆ, ಕಾಡಯ್ಯ ಹಿರೇಮಠ, ಸಂಗಣ್ಣ ದತ್ತವಾಡೆ ಇತರರಿದ್ದರು.
- ಆರ್‌ಎಸ್‌ಎಸ್ ಪ್ರಮುಖ ರಾಘವೇಂದ್ರ ಮನವಿ
- ಸಮಾವೇಶ, ಶೋಭಾಯಾತ್ರೆ
ರಾಯಬಾಗ: ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಒಂದು ಸಾವಿರ ಸ್ಥಳಗಳಲ್ಲಿ ಹಿಂದೂ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಆರ್‌ಎಸ್‌ಎಸ್ ಪ್ರಮುಖ ರಾಘವೇಂದ್ರ ಕಾಗವಾಡ ಹೇಳಿದರು.
ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಆಚಾರ, ವಿಚಾರ ನೀಡಬೇಕು. ಪ್ರತಿಯೊಬ್ಬರೂ ಹಿಂದೂ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಪ್ರತಿ ಓಣಿಗಳಲ್ಲಿ ಹಿಂದೂಪರ ಸಂಘಟನೆ ಕಟ್ಟಿ ಬೆಳೆಸಬೇಕು. ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮುಂದಾಗಬೇಕು. ಗೋಪೂಜೆ ಮಾಡಬೇಕು ಎಂದರು.
ಪಟ್ಟಣದ ಅಂಬಾಭವಾನಿ ಮಂದಿರದಿಂದ ಶೋಭಾಯಾತ್ರೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾವೀರ ಭವನದ ಆವರಣದಲ್ಲಿ ಸಮಾವೇಶಗೊಂಡಿತು.
ಶಶಿಕಾಂತ ಗುರೂಜಿ, ಭರತೇಶ ಬನವಣೆ, ವೀರಭದ್ರ ಸ್ವಾಮೀಜಿ, ವೈಭವಿ ಕುಲಕರ್ಣಿ ಮಾತನಾಡಿದರು. ಶಾಸಕ ಡಿ.ಎಂ.ಐಹೊಳೆ, ಜಿಪಂ ಮಾಜಿ ಸದಸ್ಯ ಪ್ರಣಯ ಪಾಟೀಲ, ಅನಂತಾನಂದ ಸ್ವಾಮೀಜಿ, ಧೂಳಗೌಡ ಪಾಟೀಲ, ಸದಾಶಿವ ದೇಸಿಂಗೆ, ಪೃಥ್ವಿರಾಜ ಜಾಧವ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಶ್ರೀಮಂತ ಸಲಗರೆ, ಶಿವಾನಂದ ಐಹೊಳೆ, ಅಣ್ಣಾಸಾಹೇಬ ಖೇಮಲಾಪುರೆ, ನಿಂಗಪ್ಪ ಪಕಾಂಡಿ, ವೆಂಕಟೇಶ ದೇಶಪಾಂಡೆ, ಕಾಡಯ್ಯ ಹಿರೇಮಠ, ರಮೇಶ ಗಾಯಕವಾಡ, ಕಿರಣ ಕಲ್ಲೋಳಕರ, ವಸಂತ ಕಾಂಬಳೆ, ಮಹೇಶ ಕರಮಡಿ, ರಾಜಶೇಖರ ಖನದಾಳೆ, ಕಲ್ಯಾಣರಾವ ದೇಶಪಾಂಡೆ, ರಮೇಶ ತೇಲಿ ಇತರರಿದ್ದರು.