ಮೇಖಳಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ರಾಕೇಶ ಕಟ್ಟಿಮನಿ, ಸದಾಶಿವ ೋರ್ಪಡೆ, ಸಂಗಣ್ಣ ದತ್ತವಾಡೆ, ಪಿ.ಎ.ನಾಯಿಕ ಇತರರಿದ್ದರು.
ಮೇಖಳಿ: ತೋಟದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಮೇಖಳಿ ಮುಖ್ಯ ರಸ್ತೆಯಿಂದ ಜಾನ್ವೇಕರ್ ತೋಟದ ರಸ್ತೆ ಸುಧಾರಣೆ ಹಾಗೂ 20 ಲಕ್ಷ ರೂ.ಅನುದಾನದಲ್ಲಿ ಮೇಖಳಿ-ನಾಗರಮುನ್ನೋಳ್ಳಿ ರಸ್ತೆಯಿಂದ ಮುತಾರೆ ತೋಟದ ಸರ್ಕಾರಿ ಶಾಲೆವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಜೆಇ ರಾಕೇಶ ಕಟ್ಟಿಮನಿ, ಸದಾಶಿವ ೆರ್ಪಡೆ, ಸಂಗಣ್ಣ ದತ್ತವಾಡೆ, ಪಿ.ಎ.ನಾಯಿಕ, ಕುಮಾರ ಮರಭೀಮಗೋಳ, ಸಾತಪ್ಪ ಮುತಾರೆ, ಬೀರು ನಾಯಿಕ, ಭೀಮಶಿ ಸುತಾರ, ಮಹೇಶ ಮುತಾರೆ, ಭೀಮಸೇನ ಮುತಾರೆ, ರಾಜು ನಾಯಿಕ, ಮಂಜು ಮುತಾರೆ ಇತರರು ಇದ್ದರು.