ಬೆಳಗಾವಿ ನಗರದ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ನ ಮಳಿಗೆಯಲ್ಲಿ ಗುರುವಾರ ಸುದ್ದಿಗೋಷ್ಠೀಯಲ್ಲಿ ಅಮಜದ್ ಜಮಾದಾರ ಮಾತನಾಡಿದರು. ಈರಣ್ಣಾ ಶಿವಶಟ್ಟಿ, ಪ್ರಶಾಂತ ನಾಂದ್ರೆ, ಸಂದೀಪ ಎನ್., ವಿಶ್ವನಾಥ ಅಂಬೇವಾಡಿಕರ್ ಇತರರಿದ್ದರು.
ಬೆಳಗಾವಿ : ಶ್ರಾವಣ ಮಾಸ, ಮುಂಬರುವ ಹಬ್ಬಗಳ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸಲು ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಟೆಕ್ಸ್‌ಟೈಲ್(ಬಿಎಸ್‌ಸಿ) ಮಾಲ್‌ನಲ್ಲಿ ಬಹುನಿರೀಕ್ಷಿತ ’ಡಬಲ್ ಡಿಸ್ಕೌಂಟ್ ಸೇಲ್’ ನ್ನು ಜು.26ರಿಂದ ಆಗಷ್ಟ್ 23ರವರೆಗೆ ಆಯೋಜಿಸಿದೆ. ಗ್ರಾಹಕರು ಈ ಅಪರೂಪದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಮಳಿಗೆಯ ವ್ಯವಸ್ಥಾಪಕ ಅಮಜದ್ ಜಮಾದಾರ ವಿನಂತಿಸಿದರು.
ನಗರದ ಬಿಎಸ್‌ಸಿ ಮಳಿಗೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿಯಲ್ಲಿನ ಬಿಎಸ್‌ಸಿ ಮಳಿಗೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಡಬಲ್ ಡಿಸ್ಕೌಂಟ್ ಸೇಲ್ ವಿಶೇಷವಾಗರಲಿದೆ ಎಂದು ತಿಳಿಸಿದರು.
ಶ್ರಾವಣ ಮಾಸ ಹಾಗೂ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಸೀರೆಗಳು, ಲೇಡೀಸ ವೇರ, ಪುರುಷರ ಉಡುಪುಗಳು, ಮಕ್ಕಳ ಉಡುಪುಗಳು, ಹೋಂ ಫರ್ನಿಶಿಂಗ ಸೇರಿ ವಿವಿಧ ವಿಭಾಗಗಳಲ್ಲಿನ ಆಯ್ದ ಸಂಗ್ರಹಗಳ ಮೇಲೆ ಡಬಲ್ ಡಿಸ್ಕೌಂಟ್ ಸೌಲಭ್ಯ ನೀಡಲಾಗುತ್ತಿದೆ. ಗುಣಮಟ್ಟದ ಬ್ರಾಂಡೆಡ್ ಉಡುಪುಗಳನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಗ್ರಾಹಕರ ವಿಶ್ವಾಸದಿಂದ ಮಳಿಗೆಯ ವಹಿವಾಟು ಮತ್ತು ಗ್ರಾಹಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಂಡಿದೆ. ವಿಶೇಷವಾಗಿ ಮಹಿಳಾ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು, ಸೀರೆ ಹಾಗೂ ಲೇಡೀಸ್ ವೇರ್ ವಿಭಾಗಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದೇ ಕಾರಣದಿಂದ ಗ್ರಾಹಕರ ನಿರೀಕ್ಷೆಯಂತೆ ವರ್ಷದಲ್ಲಿ ಒಂದು ತಿಂಗಳ ಕಾಲ ಡಬಲ್ ಡಿಸ್ಕೌಂಟ್ ಸೇಲ್ ಆರಂಭಿಸಲಾಗಿದ್ದು, ಸಾಮಾನ್ಯ ದಿನಗಳಲ್ಲಿ ಚಾಲ್ತಿಯಲ್ಲಿರುವ ಶೇ.10ರಷ್ಟು ರಿಯಾಯಿತಿಯೊಂದಿಗೆ ಇನ್ನೂ ಶೇ.10ರಷ್ಟು ಹೆಚ್ಚಿನ ರಿಯಾಯಿತಿಯನ್ನು ಹೊಸ ಸಂಗ್ರಹಗಳ ಮೇಲೆ ನೀಡುವ ಕೊಡುಗೆಯಾಗಿದೆ.ಈ ಸೇಲ್‌ನಲ್ಲಿ ಹೊಸ ಸಂಗ್ರಹಗಳಿಗೂ ಭಾರಿ ರಿಯಾಯಿತಿ ದೊರೆಯಲಿದ್ದು, ಉತ್ಪಾದನಾ ವೆಚ್ಚದ ಸಮೀಪದ ದರದಲ್ಲೇ ಬ್ರಾಂಡೆಡ್ ಉಡುಪುಗಳು ಲಭ್ಯವಾಗಲಿವೆ.
ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ನ ವ್ಯವಸ್ಥಾಪಕ ಈರಣ್ಣಾ ಶಿವಶಟ್ಟಿ, ಪ್ರಶಾಂತ ನಾಂದ್ರೆ, ಸಂದೀಪ ಎನ್., ವಿಶ್ವನಾಥ ಅಂಬೇವಾಡಿಕರ್ ಇತರರಿದ್ದರು.