ಬೆಳಗಾವಿಯ ಮಲಬಾರ್ ಗೋಲ್ಡ್‌ನಲ್ಲಿ ಸೋಮವಾರ ಜರುಗಿದ ‘ಬ್ರೈಡ್ಸ್ ಆಫ್ ಇಂಡಿಯಾ’ ಅಭಿಯಾನದ 15ನೇ ಆವೃತ್ತಿ ಉದ್ಘಾಟನೆಯಲ್ಲಿ ರೂಪದರ್ಶಿಯರಾದ ರಾಘವಿ, ನೇಹಾ ಮತ್ತು ದೇವಕಿ ಜತೆಗೆ ಲಿಜೇಶ್ ಕೆ.ಜೆ., ಫತಾಹ ಕೆ.ಟಿ. ಇತರರಿದ್ದಾರೆ. 
ಬೆಳಗಾವಿ

ಮಲಬಾರ್ ಗೋಲ್ಡ್‌ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಆರಂಭ

ಬೆಳಗಾವಿ: ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಅಭಿಯಾನದ 15ನೇ ಆವೃತ್ತಿಯನ್ನು ಸೋಮವಾರ ರೂಪ ದರ್ಶಿಯರಾದ ರಾಘವಿ, ನೇಹಾ ಮತ್ತು ದೇವಕಿ ಜಂಟಿಯಾಗಿ ಉದ್ಘಾಟಿಸಿದರು.
ವಧುವಿನ ಶ್ರೇಣಿಯು ಮಲಬಾರ್ ಗೋಲ್ಡ್ ಡೈಮಂಡ್ಸ್‌ನಿಂದ ಕುಶಲತೆ ಯಿಂದ ಸಂಗ್ರಹಿಸಿ, ರೂಪಿಸಿ, ಅಭಿವೃದ್ಧಿ ಪಡಿಸಿರುವ ವಿನ್ಯಾಸಗಳನ್ನು ಒಂದೆಡೆ ಸೇರಿಸುವ ಅಭಿಯಾನವಾಗಿದೆ. ಇದು ಪ್ರತಿ ವಧುವಿನ ಸಂಪ್ರದಾಯ ಗೌರವಿಸುವ ಶುದ್ಧತೆ, ಉದ್ದೇಶ ಮತ್ತು ಕರಕುಶಲತೆ ಯಿಂದ ತಯಾರಿಸಿದ ಆಭರಣಗಳನ್ನು ಹೊಂದಿದೆ.
ಕರಕುಶಲತೆಯಲ್ಲಿ ಆಳವಾದ ಪರಿಣತಿಯೊಂದಿಗೆ, ಮಲಬಾರ್ ಬ್ರ್ಯಾಂಡ್ ದೇಶಾದ್ಯಂತ ವಧುಗಳ ವಿಭಿನ್ನ ಸಂಪ್ರದಾಯಗಳನ್ನು ಗೌರವಿ ಸುವ ವಿನ್ಯಾಸಗಳನ್ನು ರಚಿಸುವಲ್ಲಿ ಸರಿಸಾಟಿಯಿಲ್ಲದ ಪರಂಪರೆಯನ್ನು ಕಾಯ್ದುಕೊಂಡು ಬಂದಿದೆ. ಈಗ ‘ಬ್ರೈಡ್ಸ್ ಆಫ್ ಇಂಡಿಯಾ’ (ಭಾರತದ ವಧುಗಳ) ಅಭಿಯಾನದ 15ನೇ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ವಧುವಿನ ಚಿನ್ನಾಭರಣಗಳ ಅಭಿಯಾನ ಇದಾಗಿದ್ದು, ಈ ಸಲದ ಆವೃತ್ತಿ 22 ವಧುಗಳು ಮತ್ತು 10 ತಾರಾ ನಟಿಮಣಿಗಳನ್ನು ಒಂದೆಡೆ ಸೇರಿಸಲಿದೆ. ಇವರಲ್ಲಿ ಶ್ರೀನಿಧಿ ಶೆಟ್ಟಿ, ಕಾರ್ತಿ, ಎನ್‌ಟಿಆರ್, ಆಲಿಯಾ ಭಟ್ಟ, ಕರೀನಾ ಕಪೂರ್ ಖಾನ್, ಅನಿಲ್ ಕಪೂರ, ರುಕ್ಮಿಣಿ ಮೈತ್ರಾ, ಸವ್ಯಸಾಚಿ ಮಿಶ್ರಾ, ಪ್ರಾರ್ಥನಾ ಬೆಹೆರೆ ಮತ್ತು ಮಾನಸಿ ಪಾರೇಖ ಮತ್ತಿತರ ಖ್ಯಾತನಾಮರು ಸೇರಿದ್ದಾರೆ.
ಗ್ರಾಹಕರಿಗೆ ಮೌಲ್ಯ, ವಿಶ್ವಾಸ ಮತ್ತು ಶ್ರೇಷ್ಠತೆಯನ್ನು ಒದಗಿಸುವ ನಿಟ್ಟಿನಲ್ಲಿ ತನ್ನ ಸಂಪ್ರದಾಯ ಮುಂದುವರಿಸಿರುವ ಮಲಬಾರ್ ಈ ಭವ್ಯ ಶೋರೂಂನ ಪ್ರಾರಂಭವನ್ನು ಸ್ಮರಣೀಯವಾಗಿಸಲು ವಿನ್ಯಾಸಗೊಳಿಸಲಾದ ವಿಶೇಷ ಡೀಲ್‌ಗಳನ್ನು ಗ್ರಾಹಕರ ಮುಂದಿಡುತ್ತಿದೆ. ಕರಕುಶಲತೆಯನ್ನು ಮೌಲ್ಯದೊಂದಿಗೆ ಸಂಯೋಜನೆಗೊಳಿಸುವ ಮೂಲಕ ಆಭರಣಗಳಲ್ಲಿ ಹೂಡಿಕೆ ಮಾಡಲು ಗ್ರಾಹಕರಿಗೆ ಈ ಕೊಡುಗೆಗಳು ಅವಕಾಶವನ್ನು ಕಲ್ಪಿಸುತ್ತದೆ.
ಕಾರ್ಯಕ್ರಮದಲ್ಲಿ ಬೆಳಗಾವಿ ಮಲಬಾರ್ ಗೋಲ್ಡ್ ಮುಖ್ಯಸ್ಥ ಲಿಜೇಶ ಕೆ.ಜೆ., ಫತಾಹ ಕೆ.ಟಿ., ಅಬ್ದುಲ್ ಕರೀಂ, ಫಕ್ರುದ್ದೀನ್ ಎನ್., ಅರುಣ ಕೆ., ಮಾರ್ಕೆಟಿಂಗ್ ಮ್ಯಾನೇಜರ್ ಅನಿಲ ಖೋತ, ಮನಿಕಂಠ ಜಿ. ಇತರರಿದ್ದರು.