ಬೆಳಗಾವಿಯ ಕೆಎಲ್ಇ ವೇಣುಧ್ವನಿ ಫೋನ್ ಇನ್ದಲ್ಲಿ ಡಾ.ಸೋನಾಲಿ ಬಿಜ್ಜರಗಿ ಕೇಳುಗರ ಪ್ರಶ್ನೆಗೆ ಉತ್ತರಿಸಿದರು. ಮನೀಷಾ ಪಿ.ಎಸ್., ಮಂಜುನಾಥ ಪೈ ಇದ್ದರು.
ಹುಟ್ಟಿದ ತಕ್ಷಣ ಬರುವ ಕೊಲಸ್ಟ್ರಮ್ ತುಂಬಾ ಪೌಷ್ಟಿಕವಾಗಿರುತ್ತದೆ. ಮಗು ತನ್ನ ತಾಯಿ ಹಾಲಿನ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ. ಜತೆಗೆ ಸ್ತನ್ಯಪಾನದಿಂದ ಹಲವಾರು ಆರೋಗ್ಯ ಪ್ರಯೋಜನಗಳು ತಾಯಿ&ಮಗು ಇಬ್ಬರಿಗೂ ಲಭಿಸುತ್ತದೆ ಎಂದು ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕ ಮಕ್ಕಳ ತೆ ಡಾ.ಸೋನಾಲಿ ಬಿಜ್ಜರಗ್ಗಿ ಹೇಳಿದರು.
ಕೆಎಲ್ಇ ವೇಣುಧ್ವನಿ 90.4 ಎಫ್.ಎಂ. ಕೇಂದ್ರ, ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್ಇ ಜವಾಹರಲಾಲ್ ನೆಹರು ವೈದ್ಯಕಿಯ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ನೇರ ಫೋನ್&ಇನ್ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗೆ ಉತ್ತರಿಸುತ್ತ ಜಾಗೃತಿ ಮೂಡಿಸಿದರು.
ವಿಶ್ವ ಸ್ತನ್ಯಪಾನ ಸಪ್ತಾಹದ ಇತಿಹಾಸ, ೂಷವಾಕ್ಯ, ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ವಿಭಾಗದಲ್ಲಿರುವ ಆರೋಗ್ಯ ಸೇವೆ, ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು.
ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನೀಷಾ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.