ನಂದಗಾಂವ ಗ್ರಾಮದಲ್ಲಿ ಭರಮದೇವರ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಅಮರೇಶ್ವರ ಮಹಾರಾಜರು ಮಾತನಾಡಿದರು. ಸತ್ಯಪ್ಪ ಬಾಗೆಣ್ಣವರ, ಅಣ್ಣಾಸಾಬ ಪಾಟೀಲ, ಕಿರಣ ಗೊಂದಳಿ ಇತರರಿದ್ದರು.
ಯುವಜನರು ಕ್ರೀಡೆಯಲ್ಲಿ ಪಾಲ್ಗೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಕೌಲಗುಡ್ಡದ ಸಿದ್ಧಸಿರಿ ಅಮರೇಶ್ವರ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಭರಮದೇವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಸೋಲು-ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವ ಎಲ್ಲರಲ್ಲಿಯೂ ಇರಬೇಕು. ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕು. ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿರುವ ಜಾತ್ರಾ ಕಮಿಟಿ ಕಾರ್ಯ ಶ್ಲಾಘನೀಯ ಎಂದರು.
ಮುಖಂಡ ಸತ್ಯಪ್ಪ ಬಾಗೆಣ್ಣವರ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿ ಸದೃಢ ಶರೀರ ನಿರ್ಮಿಸಿಕೊಳ್ಳಬೇಕು ಎಂದರು. ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿದ್ದವು. ನಾಗನೂರ ತಂಡ ಪ್ರಥಮ, ಕಲ್ಲೊಳ್ಳಿ ತಂಡ ದ್ವಿತೀಯ, ಚಿಂಚಲಿ ತಂಡ ತೃತೀಯ, ನಂದೇಶ್ವರ ತಂಡ ಚತುರ್ಥ ಸ್ಥಾನ ಪಡೆದವು. ಬೆಳಗ್ಗೆ ಭರಮದೇವರ ಗದ್ದುಗೆಗೆ ಮಹಾಭಿಷೇಕ ನೆರವೇರಿಸಲಾಯಿತು. ಬಳಿಕ ಕಲಾ ಪ್ರದರ್ಶನ ಜರುಗಿದವು.
ಮುಖಂಡರಾದ ಅಣ್ಣಾಸಾಬ ಪಾಟೀಲ, ಕಿರಣ ಗೊಂದಳಿ, ಮಲ್ಲಪ್ಪ ನಿಲಜಗಿ, ಸುರೇಶ ಇಚೇರಿ, ಸಿದ್ದಪ್ಪ ಇಚೇರಿ, ಅನಿಲ ನಾಟೇಕಾರ, ಬೀರಪ್ಪ ಇಚೇರಿ, ಮಹಾವೀರ ಹುಡೇದ, ಶಾಂತು ಸಪ್ತಸಾಗರ ಇತರರಿದ್ದರು.