ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರಥ್ವಿ ಕತ್ತಿ, ಎಂ.ಬಿ.ಜಿರಲಿ, ಎಪ್.ಎಸ್..ಸಿದ್ದನಗೌಡ್ರ, ಸುಭಾಷ ತುರಮರಿ, ರಾಚಯ್ಯ ಹಿರೇಮಠ ಇತರರಿದ್ದರು. 
ಬೆಳಗಾವಿ

ಭಜನೆ ಹಾಡುಗಳ ಮೂಲಕ ಬಿಜೆಪಿ ಪ್ರತಿಭಟನೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ :

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅನುದಾನ ದುರ್ಬಳಕೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಪಾದಾರ್ಪಣೆ ಮಾಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜೆಪಿ ನಗರ, ಗ್ರಾಮೀಣ ಘಟಕದ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು, ಮಾಜಿ ಶಾಸಕರು ಭಜನೆಯ ಹಾಡುಗಳು ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಕೆಲವರು ಹಾಡಿನ ಮೂಲಕ ಸರ್ಕಾರದ ಭ್ರಷ್ಟಾಚಾರ, ಆಡಳಿತದ ವೈಪಲ್ಯ, ಅಭಿವೃದ್ಧಿ ಕುಂಠಿ, ಕಾಮಗಾರಿಗಳಲ್ಲಿ ಶೇ.60ರಷ್ಟು ಕಮಿಷನ್ ಹೀಗೆ ವಿವಿಧ ವಿಷಯಗಳನ್ನು ಉಲ್ಲೇಖಿಸಿ ಜನರ ಗಮನ ಸೆಳೆಯಲು ಪ್ರಯತ್ನಿಸಿದರು. ಹಾಡಿದ ದಾಟಿಯಲ್ಲಿ ಯೇ ಪ್ರತಿಭಟನೆಯ ಆಕ್ರೋಶ ಹೊರಹಾಕಿದರು.
ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಆಗಮಿಸಿದ ನೂರಾರು ಕಾರ್ಯಕರ್ತರು, ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಬಿಐ ಅಧಿಕಾರಿಗಳು ಮೂರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜಾರಿ ನಿರ್ದೇಶನಾಲಯವೂ ಸಹ ಒಂದು ಚಾರ್ಜ್‌ಸೀಟ್ ಸಲ್ಲಿಸಿದೆ. ಬಳಿಕ ನಾಗೇಂದ್ರ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ನಂತರ ಜಾಮೀನನ ಹೊರ ಬಂದಿರುವವರಿಗೆ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ನೀಡಿದ್ದಾರೆ. ಇದು ದಲಿತ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಕೂಡಲೇ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಎಪ್.ಎಸ್..ಸಿದ್ದನಗೌಡ್ರ, ಸುಭಾಷ ತುರಮರಿ, ರಾಚಯ್ಯ ಹಿರೇಮಠ, ಮಲ್ಲಿಕಾರ್ಜುನ ಮಾದಮ್ಮನವರ, ಸತ್ಯಪ್ಪ ನಾಯಿಕ,ಸಂದೀಪ ದೇಶಪಾಂಡೆ , ಗುರುಪಾದ ಕಳ್ಳಿ, ಗುರುರಾಜ ಕುಲಕರ್ಣಿ,ಸಚಿನ ಕಡಿ, ಪ್ರಫುಲ್ ಪಾಟೀಲ,ಸುನೀಲ ಮರಕುಂಬಿ,ಬಸವರಾಜ ನೇಸರಗಿ, ಲಕ್ಕಪ್ಪ ಕಾರಗಿ, ವಿಶಾಲ ಬೋಗುರ, ಪ್ರವೀಣ್ ಶಿಂಗಾರಿ, ಪ್ರಶಾಂತ್ಅಮ್ಮಿನಭಾವಿ, ಶಂಭು ಹೂಲಿ ಇತರರಿದ್ದರು.
ಕೋಟ್ಸ್
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಸಚಿವ ಬಿ. ನಾಗೇಂದ್ರ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಹಿಂದೆ ಇದೇ ನೂರಾರು ಕೋಟಿ ರೂ. ಅನುದಾನ ದುರ್ಬಳಕೆ ಆರೋಪದ ಮೇಲೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣ ತನಿಖೆ ಹಂತದಲ್ಲಿರುವ ಸಂದರ್ಭದಲ್ಲಿಯೇ ಸಚಿವ ಸ್ಥಾನ ವಹಿಸಿಕೊಂಡಿರುವುದು ಸರ್ಕಾರದ ವೈಪಲ್ಯಕ್ಕೆ ಸಾಕ್ಷಿ.
-ಪ್ರಥ್ವಿ ಕತ್ತಿ, ಬಿಜೆಪಿ ಯುವ ಮುಖಂಡ
.............