ಬೆಳಗಾವಿಯ ಧರ್ಮನಾಥ ವೃತ್ತದಲ್ಲಿ ಭಾನುವಾರ ಬಜೆಟ್ ಮಂಡನೆ ಬಳಿಕ ಬಿಜೆಪಿಯಿಂದ ಸಂಭ್ರಮಾಚರಿಸಲಾಯಿತು.  
ಬೆಳಗಾವಿ

ಬಿಜೆಪಿಗರಿಂದ ಸಿಹಿ ಹಂಚಿ ಸಂಭ್ರಮ

ಡಿ.ವಿ. ಕಮ್ಮಾರ
ಬೆಳಗಾವಿ: ಇಲ್ಲಿನ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಕೇಂದ್ರ ಬಜೆಟ್ ಮಂಡನೆಯ ನೇರಪ್ರಸಾರ ವೀಕ್ಷಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು, ಮಂಡನೆ ಪೂರ್ಣಗೊಂಡ ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.
ಪಕ್ಷದ ಕಚೇರಿಯ ಸಂಭ್ರಮಾಚರಣೆ ಬಳಿಕ ಧರ್ಮನಾಥ ವೃತ್ತದಲ್ಲೂ ಸಾರ್ವಜನಿಕರಿಗೂ ಸಿಹಿ ಹಂಚಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ ಕೋಲಕಾರ, ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡರ, ಕೋಶಾಧ್ಯಕ್ಷ ಸಂತೋಷ ದೇಶನೂರ, ಚೇತನ ಅಂಗಡಿ, ವೀರಭದ್ರ ಪೂಜಾರಿ, ಸುಭಾಷ ಸಣ್ಣವೀರಪ್ಪನವರ, ಆನಂದ ಅತ್ತುಗೋಳ ಇತರರಿದ್ದರು.