ಪೊಲೀಸ್ ಠಾಣೆಯಲ್ಲಿ ಹುಟ್ಟು ಹಬ್ಬ ಆಚರಣೆ
- ಪೊಲೀಸ್ ಠಾಣೆಯಲ್ಲಿ ಬರ್ತಡೆ ಆಚರಣೆ
- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ
- ಪೇದೆ ಹುಟ್ಟು ಹಬ್ಬ ಆಚರಣೆ
- ಸಂಕೇಶ್ವರ ಪೊಲೀಸ್ ಠಾಣೆ
ಪೊಲೀಸ್ ಠಾಣೆಯಲ್ಲಿ ಬರ್ತಡೆ ಆಚರಣೆ
ಸಂಕೇಶ್ವರ: ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಇತರೆ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ನಿಷೇಧವಿದ್ದರೂ ಸರ್ಕಾರದ ಸುತ್ತೋಲೆ ಧಿಕ್ಕರಿಸಿ ಪೊಲೀಸ್ ಠಾಣೆಯಲ್ಲಿ ಪೇದೆಯೊಬ್ಬರ ಬರ್ತಡೇ ಆಚರಣೆ ಮಾಡುವ ಮೂಲಕ ಸಂಕೇಶ್ವರ ಪೊಲೀಸ್ ಠಾಣೆ ಪೊಲೀಸರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಪಡಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ಪೇದೆ ರಮೇಶ ನಾಯಿಕ ಜನ್ಮದಿನಾಚಣೆ ಠಾಣೆಯಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬರ್ತಡೇ ವೇಳೆ ಪಿಎಸ್ಐ ಉಮೇಶ ಶೆಟ್ಟಣ್ಣವರ ಭಾಗವಹಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆಗೆ ನಿಷೇಧವಿದ್ದರೂ ಡೊಂಟ್ ಕೇರ್ ಎಂದ ಸಂಕೇಶ್ವರ ಪೊಲೀಸರು. ಪೇದೆಗಳಿಗೆ ಬಿಡಿ ಪಿಎಸ್‌ಐ ಶೆಟ್ಟನ್ನವರ ಅವರಿಗೆ ಆದೇಶ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಪೇದೆಯ ಬರ್ತ್ ಡೇ ಸೆಲಿಬ್ರೇಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ತಕ್ಷಣ ಎಚ್ಚೆತ್ತುಕೊಂಡು ಪೊಲೀಸರ ಪೋಟೋ ಡಿಲಿಟ್ ಮಾಡಿದ್ದಾರೆ.ಪೊಲೀಸರ ಈ ನಡೆಯು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.