ಬಿಳ್ಳೂರ ಗ್ರಾಮದ ಲಿಂ.ರಾಜಯೋಗಿ ಗುರುಬಸವ ಮಹಾಶಿವಯೋಗಿ ಜಾತ್ರೆ ನಿಮಿತ್ತ ವಿಜೃಂಭಣೆಯಿಂದ ರಥೋತ್ಸವ ಜರುಗಿತು. 
ಬೆಳಗಾವಿ

ಬಿಳ್ಳೂರು ರಥೋತ್ಸವ ಅದ್ದೂರಿ

ಐಗಳಿ: ತೇರು ಎಳೆಯುವುದರಿಂದ ಮನಸ್ಸು ಹಗುರವಾಗಲಿದೆ, ಒಡೆದ ಮನಸ್ಸು ಒಂದುಗೂಡಲಿವೆ ಎಂದು ಬಿಳ್ಳೂರು ಗುರುಬಸವ ವಿರಕ್ತ ಮಠದ ಪೀಠಾಧ್ಯಕ್ಷ ಗುರು ಚನ್ನಬಸವ ಸ್ವಾಮೀಜಿ ಹೇಳಿದರು. ಸಮೀಪದ ಬಿಳ್ಳೂರು ಗ್ರಾಮದಲ್ಲಿ ಲಿಂ.ರಾಜಯೋಗಿ ಗುರುಬಸವ ಮಹಾಶಿವಯೋಗಿ ಜಾತ್ರೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತ್ರೆಯಿಂದ ಸಂಬಂಧ ವೃದ್ಧಿಸಲಿವೆ. ಗ್ರಾಮಸ್ಥರು ಒಟ್ಟುಗೂಡಿ ಜಾತ್ರೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿದರು. ಡೊಳ್ಳು ಕುಣಿತ ಲೇಜಿಮ್, ಗೊಂಬೆ ಕುಣಿತ ಸೇರಿದಂತೆ ಕಲೆಗಳು ಭಕ್ತರನ್ನು ರಂಜಿಸಿದವು. ಅನ್ನಪ್ರಸಾದ ವಿತರಿಸಲಾಯಿತು.