Bike rider dies 
ಬೆಳಗಾವಿ

ಬೈಕ್​ ಸವಾರ ಸಾವು

ಖಾನಾಪುರ: ರಾಮನಗರ&ಅಳ್ನಾವರ ಮಾರ್ಗದಲ್ಲಿರುವ ಘಾಲಿ ಕ್ರಾಸ್​ನಲ್ಲಿ ಬುಧವಾರ ಕಂಟೇನರ್​ ಹಾಯ್ದ ಪರಿಣಾಮ ಜೋಯಿಡಾ ತಾಲೂಕಿನ ಮಲಂಬ ಗ್ರಾಮದ ಬಾಲಕೃಷ್ಣ ಯಶವಂತ ಚೌಧರಿ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್​ನಲ್ಲಿ ಅಳ್ನಾವರದಿಂದ ರಾಮನಗರದತ್ತ ಹೋಗುತ್ತಿದ್ದಾಗ ಕಂಟೇನರ್​ ಡಿಕ್ಕಿ ಹೊಡೆದು ಈ ಟನೆ ನಡೆದಿದೆ. ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಖಾನಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.