ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಕ್ರೆಡೈ ಬೆಲ್ಕಾನ್ ಪ್ರದರ್ಶನ ಮಳಿಗೆ ಭೂಮಿ ಪೂಜೆಯಲ್ಲಿ ಯುವರಾಜ ಹುಲಜಿ, ಮಹೇಶ ಫಾಗ್ರೆ, ಜ್ಞಾನೇಶ್ವರ ಸಾಯಿನೇಕರ, ಸಚಿನ ಬೈಲವಾಡ, ಪ್ರಕಾಶ ಕಾಲಕುಂದ್ರಿಕ, ಅಜಿಂಕ್ಯಾ ಕಾಲಕುಂದ್ರಿಕರ, ವಿನಯ ಕದಮ ಇತರರು ಪಾಲ್ಗೊಂಡಿದ್ದರು.
ಬೆಳಗಾವಿ: ಕ್ರೆಡೈ ಬೆಲ್ಕಾನ್ ಮತ್ತು ಯಶ್ ಈವೆಂಟ್ಸ್‌ನಿಂದ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಫೆ.5ರಿಂದ 8ರವರೆಗೆ ಏರ್ಪಡಿಸಿರುವ ‘ಬೆಲ್ಕಾನ್ 2026’ ನಿರ್ಮಾಣ, ಆಸ್ತಿ, ಕಟ್ಟಡ ಸಾಮಗ್ರಿಗಳ ಒಳಾಂಗಣ, ಹೊರಾಂಗಣ, ಪೀಠೋಪಕರಣಗಳ ಪ್ರದರ್ಶನ ಮತ್ತು ಆಟೋ ಎಕ್ಸ್‌ಪೋದ ಮಳಿಗೆಗಳ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
ಕ್ರೆಡೈ ಅಧ್ಯಕ್ಷ ಯುವರಾಜ ಹುಲಜಿ, ಮಹೇಶ ಫಾಗ್ರೆ, ಜ್ಞಾನೇಶ್ವರ ಸಾಯಿನೇಕರ, ಸಚಿನ ಬೈಲವಾಡ, ಯಶ ಈವೆಂಟ್ಸ್ ನಿರ್ದೇಶಕ ಪ್ರಕಾಶ ಕಾಲಕುಂದ್ರಿಕರ, ಅಜಿಂಕ್ಯಾ ಕಾಲಕುಂದ್ರಿಕರ, ವಿನಯ ಕದಮ, ಸಚಿನ ಕಳ್ಳಿಮನಿ, ತನಿಷ ಕಳ್ಳಿಮನಿ, ರಾಜೇಂದ್ರ ಮುತಗೇಕರ, ಅಭಿಷೇಕ ಮುತಗೇಕರ, ಕ್ರೆಡೈ ಇವೆಂಟ್ ಚೇರ್ಮನ್ ಪ್ರಶಾಂತ ವಾಂಡಕರ, ದೀಪಾ ವಾಂಡಕರ, ಅಮರ ಅಕ್ನೋಜಿ, ಸೀಮಾ ಹುಲಜಿ, ಸುಧೀರ ಗಡ್ಡೆ, ರಾಜೇಶ ಮಾಳಿ, ನಾರಾಯಣ ಪವಾರ, ವೀರೇಶ ಶೆಟ್ಟಣ್ಣವರ, ಯಶ ಕಳ್ಳಿಮನಿ, ಗೋವಿಂದ ಟಕ್ಕೇಕರ, ಆನಂದ ಕುಲಕರ್ಣಿ, ಯಶ ಹಿರೇಮಠ ಇತರರಿದ್ದರು.
ಪ್ರದರ್ಶನದ ವಿಶೇಷ: ಮೊದಲ ಬಾರಿಗೆ, ಪ್ರದರ್ಶನ ಆಧುನಿಕ ಮತ್ತು ಸುಸಜ್ಜಿತ ಹವಾನಿಯಂತ್ರಿತ ಮಾರ್ಕ್ಯೂನಲ್ಲಿ ನಡೆಯಲಿದ್ದು, ಬೆಂಗಳೂರು ನಂತರ ಬೆಳಗಾವಿಯಲ್ಲೇ ಒಳಾಂಗಣ ಮತ್ತು ನಿರ್ಮಾಣ ಸಾಮಗ್ರಿ ಪ್ರದರ್ಶನ ಆಯೋಜಿಸಲಾಗುತ್ತಿದೆ. ಗ್ರಾಹಕರು ತಮ್ಮ ಮನೆಗಾಗಿ ಎಲ್ಲಾ ರೀತಿಯ ನಿರ್ಮಾಣ ಸಾಮಗ್ರಿ ಒಂದೇ ಸೂರಿನಡಿ ನೋಡಿ, ಮಾಹಿತಿ ಪಡೆಯಬಹುದಾಗಿದ್ದು, ಇದಕ್ಕಾಗಿ ಒಂದು ಲಕ್ಷ ಚದರ ಅಡಿ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಬೆಲ್ಕಾನ್‌ನ 150 ಸ್ಟಾಲ್‌ಗಳಲ್ಲಿ ಫ್ಲಾಟ್‌ಗಳು, ಬಂಗಲೆಗಳು, ಇಟ್ಟಿಗೆಗಳು, ಮರಳು, ಉಕ್ಕಿನ ಪ್ಲೈವುಡ್, ಬೆಳಕು, ಮನೆ ಅಲಂಕಾರ, ಲಿಫ್ಟ್ ಗಳಂತಹ ನಿರ್ಮಾಣ ವಲಯದಲ್ಲಿನ ಎಲ್ಲವೂ ಲಭ್ಯವಿರಲಿವೆ. ಆಟೋ ಎಕ್ಸ್‌ಪೋದಲ್ಲಿ 100 ಸ್ಟಾಲ್‌ಗಳಲ್ಲಿ ವಿವಿಧ ಹೆಸರಾಂತ ಕಂಪನಿಯ ಕಾರು, ದ್ವಿಚಕ್ರ ವಾಹನ, ಇ-ವಾಹನ ಮತ್ತು ವಾಹನಗಳ ಬಿಡಿ ಭಾಗಗಳು, ವಿಂಟೇಜ್ ಕಾರುಗಳು, ಸ್ಟಂಟ್ ಡ್ರೈವಿಂಗ್ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.