ಜುಗೂಳ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಕಾಕಾಸಾಹೇಬ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಉಮೇಶ ಪಾಟೀಲ, ಅನಿಲ ಕರೋಲೆ, ಅಕ್ಷಯ ಪಾಟೀಲ ಇತರರಿದ್ದರು. 
ಬೆಳಗಾವಿ

ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಕಾಗವಾಡ: ಸಚಿವ ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಶಾಸಕ ರಾಜು ಕಾಗೆ ಪ್ರಯತ್ನದಿಂದ ಜುಗೂಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಆಸ್ಪತ್ರೆ ಈಗ ಈಡೇರಿದೆ ಎಂದು ಕಾಗವಾಡ ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ ಪಾಟೀಲ ತಿಳಿಸಿದ್ದಾರೆ.
ಜುಗೂಳ ಗ್ರಾಮದಲ್ಲಿ 65 ಲಕ್ಷ ರೂ. ಅನುದಾನಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಶಾಸಕರು, ಜುಗೂಳ ಅಭಿವೃದ್ಧಿಗೆ ಅನುದಾನದ ಹೊಳೆ ಹರಿಸಿದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಅನಿಲ ಕರೋಲೆ, ಅಕ್ಷಯ ಪಾಟೀಲ, ಅಮೀನ್ ನಂದಗಾವೆ, ಬಸವರಾಜ ನಂದಾಳೆ, ಮಹಾದೇವ ಕಾಂಬಳೆ, ಚಿದಾನಂದ ತಾರದಾಳೆ, ಸುರೇಶ ಪಾಟೀಲ, ದಯಾನಂದ
ಮಿನಚೆ, ಶಿವಾನಂದ ಅಮ್ಮಣಗೆ, ಬಿಂದು ಅಧೋಕೆ, ಾರೂಖ್ ಕಳಾವಂತ, ಗುತ್ತಿಗೆದಾರ ವಿಜಯ
ಚಿಂಚಲೆ ಇತರರಿದ್ದರು.