ಸವದತ್ತಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ನಗರ ಭಕ್ತಿ, ಭಂಡಾರ ಮಧ್ಯೆ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಸವದತ್ತಿ:
ಜಾನಪದ ಕಲಾತಂಡ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನಗರದ ದೇವಿಕಟ್ಟೆಯಿಂದ ಸವಳಬಾವಿ ಓಣಿ, ಹನುಮಗೇರಿ, ಜನತಾ ಪ್ಲಾಟ್, ಭಗೀರಥ ವೃತ್ತ, ಮೈಲಾರ ಕಟ್ಟಿ, ಪಟ್ಟದಕಲ್ಲು ಓಣಿ, ಬೀರದೇವರ ಕಟ್ಟೆ, ಪ್ರಭುನವರ ಓಣಿ, ದಿವಟಗಿ ಓಣಿ, ಕುಂಬಾರ ಓಣಿ, ಕಟಕೋಳ ಬ್ಯಾಂಕ್ ವೃತ್ತ ಹಾಗೂ ಸಬನೀಸ್ ಓಣಿ ಮಾರ್ಗವಾಗಿ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ ಆನಿ ಅಗಸಿ ದೇವಿ ಪಾದಗಟ್ಟೆ ಮೂಲಕ ಮರಳಿ ದೇವಿಕಟ್ಟೆಗೆ ಆಗಮಿಸಿತು.
ಗಮನಸೆಳೆದ ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆ: ಜಾತ್ರೆ ಅಂಗವಾಗಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರಿವರ್ಸ್ ಚಾಲನೆ ಸ್ಪರ್ಧೆ ಗಮನಸೆಳೆಯಿತು. ಶಾಸಕ ವಿಶ್ವಾಸ ವೈದ್ಯ, ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಸ್ಪರ್ಧೆಗೆ ಚಾಲನೆ ನೀಡಿದರು. ಯುವಕರು ಉತ್ಸಾಹದಿಂದ ಸ್ಪರ್ಧಿಸಿ ತಮ್ಮ ಚಾಲನಾ ಕೌಶಲ ಪ್ರದರ್ಶಿಸಿದರು.
ಮೈನವಿರೇಳಿಸಿದ ಜಂಗೀ ಕುಸ್ತಿ: