ಯಮಕನಮರಡಿಯಲ್ಲಿ ಕೋಣ ಬಿಡುವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಂಡಾರದ ಓಕುಳಿಯಲ್ಲಿ ಮಿಂದೆದ್ದರು. 
ಬೆಳಗಾವಿ

ಯಮಕನಮರಡಿಯಲ್ಲಿ ಭಂಡಾರದೋಕುಳಿ

ರಾಘವೇಂದ್ರಗೌಡ ಭೀ ಪಾಟೀಲ್
ಉಳ್ಳಾಗಡ್ಡಿ-ಖಾನಾಪುರ:
ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕೋಣ ಬಿಡುವ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿ, ಮಳೆರಾಯನ ಕೃಪೆಗೆ ಪ್ರಾರ್ಥಿಸಿ ಗ್ರಾಮದೇವರ ಹೆಸರಲ್ಲಿ ಐದು ಮಂಗಳವಾರ ವಾರ ಬಿಡುವ ವಾಡಿಕೆ ಗ್ರಾಮೀಣ ಪ್ರದೇಶಗಳಲ್ಲಿ ಅನಾದಿ ಕಾಲದಿಂದ ಪ್ರಚಲಿತದಲ್ಲಿದೆ ಎಂದರು.
ಕೋಣ ಬಿಡುವ ಕಾರ್ಯಕ್ರಮ, ದೇವಿ ಪೂಜೆ, ನೈವೇದ್ಯ ವಿಜೃಂಭಣೆಯಿಂದ ನೆರವೇರಿತು. ಭಂಡಾರದ ಓಕುಳಿಯಲ್ಲಿ ಭಕ್ತರು ಮಿಂದೆದ್ದರು. ಜಯಂತ ಸಬನೀಸ, ರಮೇಶ ಕುಲಕರ್ಣಿ, ಪಾರೇಶ ಮಲಾಜಿ, ಮಲ್ಲಪ್ಪ ಶಿಳ್ಳಿ, ಕೆಂಪಣ್ಣ ಬಿಸಿರೊಟ್ಟಿ, ಪ್ರಕಾಶ ನಗಾರಿ, ರಾಜು ಸಾರಾಪುರಿ, ಪ್ರಕಾಶ ಬಿಸಿರೊಟ್ಟಿ, ರಾಜು ಕೋಳಿ, ಅರುಣ ವಾಘ, ಜಿನ್ನಪ್ಪ ಯಾದವಾಡಿ ಇತರರಿದ್ದರು.