ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಂದಿಕುರಬೇಟ ಕೆಜಿಎಸ್ ಶಾಲೆಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿಯನ್ನು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಪ್ರದಾನ ಮಾಡಿದರು. ವಿಜಯಾ ವಿಷ್ಣುಭಟ್, ವೀಣಾ ಪಾಟೀಲ, ಎಬೆನೇಜರ್ ಕರಬನ್ನವರ ಇತರರಿದ್ದರು.
ಗೋಕಾಕ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಕನ್ನಡ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಡಿನ ಸಮಾಚಾರ ಸೇವಾ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ತಾಲೂಕಿನ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಗೆ ರಾಜ್ಯ ಮಟ್ಟದ ಅತ್ಯುತ್ತಮ ಶಾಲೆಯ ಪ್ರಶಸ್ತಿ ನೀಡಿ ಮಾತನಾಡಿ, ಶಿಂದಿಕುರಬೇಟ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಗ್ರಾಮಸ್ಥರ, ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದರು. ಹಿರಿಯ ಸಾಹಿತಿ ವಿಜಯಾ ವಿಷ್ಣುಭಟ್, ವೀಣಾ ಪಾಟೀಲ, ಎಬೆನೇಜರ್ ಕರಬನ್ನವರ, ಸಾವಿತ್ರಿ ಕಮಲಾಪುರ, ದೇವಿಕಾ ಶೆಟ್ಟಿ, ಎಸ್.ಡಿ.ಹಂಚಿನಾಳ, ಮಧುಮತಿ ಪಾಟೀಲ, ಶ್ವೇತಾ ಸಾಲಿಮಠ, ಸಂಸ್ಥೆಯ ಅಧ್ಯಕ್ಷ ಬಸವರಾಜ ಉಪ್ಪಾರಹಟ್ಟಿ, ಸಿಆರ್‌ಪಿ ಎಸ್.ಬಿ.ಪಾಟೀಲ ಇತರರಿದ್ದರು.