ಪಟ್ಟಣಕುಡಿ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಶಾಸಕ ಗಣೇಶ ಹುಕ್ಕೇರಿ ಭೇಟಿ ನೀಡಿ ಪರಿಶೀಲಿಸಿದರು. ವಿನೋದ ಕಾಗೆ ಇದ್ದರು.
- ಗಣೇಶ ಹುಕ್ಕೇರಿ ಅನಿಸಿಕೆ
- ಪಟ್ಟಣಕುಡಿಗೆ ಭೇಟಿ ನೀಡಿ ಪರಿಶೀಲನೆ
ಚಿಕ್ಕೋಡಿ: ತಾಲೂಕಿನ ಪಟ್ಟಣಕುಡಿ ಗ್ರಾಮಕ್ಕೆ ಸೋಮವಾರ ಶಾಸಕ ಗಣೇಶ ಹುಕ್ಕೇರಿ ಭೇಟಿ ನೀಡಿ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಹಾಗೂ ಕೆರೆಗೆ ಹರಿದು ಬರುತ್ತಿರುವ ನೀರಿನ ವ್ಯವಸ್ಥೆ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ವೇದಗಂಗಾ ಹಾಗೂ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಪಟ್ಟಣಕುಡಿ, ವಾಳಕಿ, ನಾಯಿಂಗ್ಲಜ, ಚಿಂಚಣಿ, ಚಿಕ್ಕೋಡಿ (ಹಾಲಟ್ಟಿ), ಮಲಿಕವಾಡ, ಬಾನಂತಿಕೋಡಿ, ಜೋಡಕುರಳಿ ಹಾಗೂ ಕಾಡಾಪುರ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಮೂಲಕ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜತೆಗೆ ಕೃಷಿಗೂ ಅಗತ್ಯ ನೀರು ಲಭ್ಯವಾಗಲಿದೆ ಎಂದರು.
ಕ್ಷೇತ್ರದ ಪ್ರತಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ತಂದೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ
ಮಾರ್ಗದರ್ಶನದಲ್ಲಿ ಕುಡಿಯುವ ನೀರು, ರಸ್ತೆ ಸೇರಿ ಮೂಲಸೌಕರ್ಯ ಒದಗಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ವಿನೋದ ಕಾಗೆ, ಸುಕುಮಾರ ಡಿಗ್ರೆ, ಪ್ರವೀಣ ಯಮಕನಮರಡಿ, ವಿಲಾಸ ನಾಯಕ, ವಿಜಯ ಗಾವಡೆ ಇತರರಿದ್ದರು.
"
ಚಿಕ್ಕೋಡಿ ತಾಲೂಕಿ ನಲ್ಲಿರುವ ಕೆರೆ ತುಂಬಿಸುವ ಯೋಜನೆ ಗಳಿಂದ ಜನರಿಗೆ ಅನುಕೂಲವಾಗಿದೆ. ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶಾಸಕ ಗಣೇಶ ಹುಕ್ಕೇರಿ ನೀರಾವರಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಈ ಮೂಲಕ ರೈತರ ಬಹುದಿನಗಳ ಬೇಡಿಕೆ ಈಡೇರಿದೆ.
— ಪ್ರಕಾಶ ಹುಕ್ಕೇರಿ ವಿಪ ಸದಸ್ಯ ಹಾಗೂ ದೆಹಲಿ ವಿಶೇಷ ಪ್ರತಿನಿಧಿ