ಬಾಡ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ವಿನಾಯಕ ಅಮಾಸೆ, ಬಸವರಾಜ ಗಂಗಣ್ಣವರ, ಸಂಗೀತಾ ಬಿಸೂರೆ, ನಂದು ಮುಡಸಿ ಇತರರಿದ್ದರು. 
ಬೆಳಗಾವಿ

ಆರೋಗ್ಯ ಕೇಂದ್ರದಿಂದ ಅನುಕೂಲ

ಹುಕ್ಕೇರಿ: ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅವುಗಳನ್ನು ಸಮಪರ್ಕವಾಗಿ ಬಳಸಿಕೊಂಡು ಆರೋಗ್ಯವಂತ ಜೀವನ ಸಾಗಿಸಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಬಾಡ ಮತ್ತು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನೂತನ ಆರೋಗ್ಯ ಕೇಂದ್ರದಿಂದ ಹಳ್ಳಿ ಜನರಿಗೆ ಸ್ಥಳೀಯವಾಗಿಯೇ ಸೇವೆ ದೊರೆಯಲಿದ್ದು, ಕ್ಷೇತ್ರದ ಆರೋಗ್ಯ ವಲಯ ಮತ್ತಷ್ಟು ಬಲಿಷ್ಠವಾಗಲಿದೆ. ಆರೋಗ್ಯ ಕಾರ್ಯಕ್ರಮ ಅನುಷ್ಠಾನಗೊಳಿಸುವುದರ ಜತೆಗೆ ಸಾರ್ವಜನಿಕ ಆರೋಗ್ಯ ನಿರ್ವಹಣೆ ಮತ್ತು ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಆರೋಗ್ಯ ಇಲಾಖೆ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತ ವಿನಾಯಕ ಅಮಾಸೆ, ಬಸವರಾಜ ಗಂಗಣ್ಣವರ, ಆರೋಗ್ಯ ಇಲಾಖೆಯ ವಸಂತಕುಮಾರ, ಸಂಗೀತಾ ಬಿಸೂರೆ, ಭಾಗ್ಯಶ್ರೀ, ಮುಖಂಡರಾದ ನಂದು ಮುಡಸಿ, ಸುನೀಲ ಪರ್ವತರಾವ, ಅಶೋಕ ಹಿರೇಕೋಡಿ, ಗುರುನಾಥ ಕದಮ, ಸುರೇಶ ಇಂಗಳೆ, ಸಿಕಂದರ್ ಸನದಿ ಇತರರಿದ್ದರು.