ಅರಟಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿದಾನಂದ ಸವದಿ ಮಾತನಾಡಿದರು. ರಾಮಪ್ಪ ಪೂಜಾರಿ, ನಿಂಗಣ್ಣ ಬಿರಾದಾರ, ಯಂಕಪ್ಪ ಉಪ್ಪಾರ ಇತರರಿದ್ದರು.
ಅರಟಾಳ: ಸಹಕಾರ ಸಂಘದಿಂದ ಬೀಜ, ಗೊಬ್ಬರ ವಿತರಣೆಯಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರು ಸಹಕಾರ ಸಂಘದಿಂದ ಬೀಜ ಮತ್ತು ಗೊಬ್ಬರ ಪಡೆದುಕೊಳ್ಳಬಹುದು ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಶ್ರೀ ಮಾಳಿಂಗೇಶ್ವರ ವಿವಿದ್ಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಬೀಜ ಮತ್ತು ಗೊಬ್ಬರ ವಿತರಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಸಹಕಾರ ಸಂಘದಿಂದ ರೈತರಿಗೆ ಸಾಕಷ್ಟು ಅನುಕೂಲವಿದೆ. ಈ ಸಂಘದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಯುವಕರಿದ್ದು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ರೈತರು ಬಿತ್ತನೆ ಮಾಡುವ ಸಮಯದಲ್ಲಿ ಗೊಬ್ಬರ ವಿತರಿಸುತ್ತಿರುವುದು ಅನುಕೂಲವಾಗುತ್ತದೆ ಎಂದರು.
ರಾಮಪ್ಪ ಪೂಜಾರಿ, ಕೃಷಿ ಅಧಿಕಾರಿಗಳಾದ ನಿಂಗಣ್ಣ ಬಿರಾದಾರ, ಯಂಕಪ್ಪ ಉಪ್ಪಾರ, ಪಿಕೆಪಿಎಸ್ ಅಧ್ಯಕ್ಷ ರಂಗನಗೌಡ ಜಂಬಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ತೆಲಸಂಗ, ಈಶ್ವರಲಿಂಗ ಕಲಘಟಗಿ, ರಮೇಶ ಜಾಧವ, ಅರವಿಂದ ಘಾಟಗೆ, ಸೋಮಣ್ಣ ಹಟ್ಟಿ, ಶ್ರೀಶೈಲ ಪೂಜಾರಿ, ಅಣ್ಣಪ್ಪ ಮಾಳಿ, ವಿಠ್ಠಲ ಹಟ್ಟಿ, ಪಾಂಡಪ್ಪ ಮಾದರ, ಮಲ್ಲಪ್ಪ ನಾಯಿಕ, ಚಂದ್ರಪ್ಪ ಮಾದರ, ಮಲ್ಲಿಕಾರ್ಜುನ ಪೂಜಾರಿ, ಗಣಪತಿ ಭಂಡಾರಿ, ಶ್ರೀಶೈಲ ನಾಯಿಕ, ಅಪ್ಪಾಸಾಹೇಬ ಕಲಮಡಿ, ಪರಮಾನಂದ ಖ್ಯಾಡಿ ಇತರರಿದ್ದರು.