ರಾಯಬಾಗ ಪಟ್ಟಣದಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಶಾಸಕ ಡಿ.ಎಂ.ಐಹೊಳೆ ಉದ್ಘಾಟಿಸಿದು. ಪ್ರಿಯಾಂಕಾ ಜಾರಕಿಹೊಳಿ, ಮಹಾದೇವ ಸನಮುರಿ, ಎಸ್.ಆರ್.ಮಾಂಗ ಇತರರಿದ್ದರು. 
ಬೆಳಗಾವಿ

ಸರ್ಕಾರಿ ಯೋಜನೆಯಿಂದ ಅನುಕೂಲ

ಪ್ರಶಾಂತ ಹೂಗಾರ
ರಾಯಬಾಗ: ಯಾರೂ ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಚಿಂಚಲಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ ಸೋಮವಾರ ಉದ್ಘಾಟಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿ ಬಡವರು, ಶಾಲಾ ವಿದ್ಯಾರ್ಥಿಗಳು, ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು, ಪ್ರಯಾಣಿಕರಿಗೆ ಅನುಕೂಲ ಮಾಡಿದ್ದಾರೆ ಎಂದರು.
ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಆಹಾರ ತಯಾರಿಸುವ ಪ್ರತಿ ಹಂತದಲ್ಲಿ ಶುಚಿತ್ವ ಹಾಗೂ ಗುಣಮಟ್ಟ ಕಾಯ್ದುಕೊಂಡು ರುಚಿಯಾದ ಆಹಾರ ತಯಾರಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ತಹಸೀಲ್ದಾರ್ ಮಹಾದೇವ ಸನಮುರಿ, ಪಪಂ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಶಿವನಗೌಡ ಪಾಟೀಲ, ಹರೀಶ ಕುಲಗುಡೆ, ಅರ್ಜುನ ನಾಯಿಕವಾಡಿ, ನಿರ್ಮಲಾ ಪಾಟೀಲ, ಸತ್ತಾರ ಮುಲ್ಲಾ, ಹಾಜಿ ಮುಲ್ಲಾ, ದಿಲೀಪ ಜಮಾದಾರ, ನಾಮದೇವ ಕಾಂಬಳೆ, ಮಹೇಶ ಕರಮಡಿ, ಸಂಗಣ್ಣ ದತ್ತವಾಡೆ, ರಾಕೇಶ ಅವಳೆ, ಭಾರತಿ ಲೋಹಾರ, ಸುರೇಶ ಮಾಳಿ, ಅದಮ್ ಪಠಾಣ ಇತರರಿದ್ದರು.